ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸಮರ್ಪಕ ನೀರು ಸರಬರಾಜು ಮಾಡಿ

Vishwanath S
Updated On : 19 Dec 2013, 1:05 am

ಸೂಲಿಬೆಲೆ: ಪಟ್ಟಣದಲ್ಲಿ ಕಳೆದ ಕೆಲ ದಿನಗಳಿಂದ ನೀರು ಸರಬರಾಜಾಗದೇ ತುಂಬಾ ಸಮಸ್ಯೆಯಾಗಿದ್ದು, ಸಮರ್ಪಕ ನೀರು ಪೂರೈಕೆ ಮಾಡಿ ಜನರಿಗೆ ಅಗುತ್ತಿರುವ ತೊಂದರೆಯನ್ನು ನಿವಾರಣೆ ಮಾಡುವಂತೆ ಸೂಲಿಬೆಲೆ ಡಿವೈಎಫ್‌ಐ ಸಂಘಟನೆ ಒತ್ತಾಯಿಸಿದೆ.
ಈ ಬಗ್ಗೆ ಗ್ರಾಪಂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಸುಂದರ್ ಅವರಿಗೆ ಸಂಘಟನೆ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರ ಸಹಿಯುಳ್ಳ ಮನವಿ ಪತ್ರವನ್ನು ನೀಡಿದ್ದು, ಪತ್ರದಲ್ಲಿರುವಂತೆ, ಸೂಲಿಬೆಲೆ ಗ್ರಾಮದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದ್ದು, 8 ವಾರ್ಡುಗಳನ್ನು ಒಳಗೊಂಡಿದೆ. ಈ ಎಲ್ಲ ವಾರ್ಡುಗಳಿಗೆ 10 ರಿಂದ 15 ದಿನಕ್ಕೊಮ್ಮೆ ನೀರು ಸರಬರಾಜಾಗುತ್ತಿದ್ದು, ಈ ನೀರು ಅಶುದ್ಧವಾಗಿರುತ್ತದೆ. ಜನ ನೀರಿಗಾಗಿ ನಿತ್ಯ ಅಲೆದಾಟ ಮಾಡುವಂತಾಗಿದೆ. ನೀರಿಗಾಗಿ ಅಲ್ಲಿ, ಇಲ್ಲಿ ಸುತ್ತಾಟ ನಡೆಸುವಂತಾಗಿದೆ. ಗ್ರಾಪಂದವರು ಎರಡು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಬೇಕು. ಶುದ್ಧವಾದ ನೀರು ಸಿಗುವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ತುರ್ತು ಇರುವ ಕಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು. 10 ದಿನದೊಳಗೆ ಸಮಸ್ಯೆಯನ್ನು ಬಗೆಹರಿಸದ ಪಕ್ಷ ಗ್ರಾಪಂ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಮನವಿ ಪತ್ರವನ್ನು ಸ್ವೀಕರಿಸಿ ಪಿಡಿಒ ಸುಂದರ್ ಮಾತನಾಡಿ, ನೀರಿನ ಸಮಸ್ಯೆ ಬಗ್ಗೆ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದು  ಸಮಸ್ಯೆಯನ್ನು ಪರಿಸರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಡಿವೈಎಫ್‌ಐ ಸಂಘಟನೆಯ ಹೊಸಕೋಟೆ. ತಾ ಕಾರ್ಯದರ್ಶಿ ಮೋಹನ್ ಬಾಬು, ಹೋಬಳಿ ಘಟಕ ಅಧ್ಯಕ್ಷರಾದ ಕೇಶವ್, ಕಾರ್ಯದರ್ಶಿಗಳಾದ ಸುರೇಶ್, ನರಸಿಂಹಮೂರ್ತಿ, ಶಶಿಕುಮಾರ್, ನಾಗೇಂದ್ರ, ನವೀನ್ ಕುಮಾರ್, ಶಾಂತ್ ಕುಮಾರ್, ಮುನೇಂದ್ರ, ಮಹೇಶ್ ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement