ಸಿಇಟಿ ಗೊಂದಲ ಮುಕ್ತ ಚರ್ಚೆಯಾಗಲಿ: ಪುಟ್ಟಣ್ಣ
ನೆಲಮಂಗಲ: ಸಿಇಟಿ ಗೊಂದಲ ನಿವಾರಿಸುವಲ್ಲಿ ಸರ್ಕಾರ ಸಾರ್ವಜನಿಕವಾಗಿ ಮುಕ್ತವಾಗಿ ಚರ್ಚಿಸಿ ವಿದ್ಯಾರ್ಥಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಒತ್ತಾಯಿಸಿದರು.
ಶುಕ್ರವಾರ ಪಟ್ಟಣದ ಹರ್ಷ ಸಮೂಹ ಶಿಕ್ಷಣ ಸಂಸ್ಥೆಯ ಶಾಲಾ ಆವರಣದಲ್ಲಿ ಆಯೋಜಿಸಿದ್ದ ವಾರ್ಷಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ
ಅವರು ಮಾತನಾಡಿದರು. ಬಡ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕವನ್ನು ನಿಗದಿಪಡಿಸದಿದ್ದರೆ ವಿಧಾನಸೌಧದ ಮುಂಭಾಗ ಹೋರಾಟ ನಡೆಸುತ್ತೇವೆ ಎಂದರು.
ಮಕ್ಕಳಿಗೆ ಪೋಷಕರು ಉತ್ತಮ ಶಿಕ್ಷಣ ಕೊಡಿಸುವುದರ ಜೊತೆಗೆ ನೆರೆಹೊರೆಯ ಪರಿಸರ ಸಂಬಂಧಗಳ ಆತ್ಮೀಯತೆ ಕಲಿಸಬೇಕು. ಇಂದಿನ ಸಮಾಜದಲ್ಲಿ ಮಕ್ಕಳು ಸುಶಿಕ್ಷಿತರಾಗಿ ತಮ್ಮ ಪೋಷಕರನ್ನು ಅನಾಥಶ್ರಮಗಳಿಗೆ ಸೇರಿಸುತ್ತಿರುವುದು ಬಹಳ ಬೇಸರವಾಗುತ್ತಿದೆ ಎಂದರು.
ಇದೇ ವೇಳೆ ಪ್ರತಿಭಾವಂತ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಹರ್ಷ ಸಂಸ್ಥೆಯ ನಿರ್ದೇಶಕ ಶಿವಕುಮಾರ್, ಶಿವಣ್ಣ, ಪ್ರಕಾಶ್, ಗಿರಿಜಾ ಶಿವಕುಮಾರ್, ಪ್ರಾಂಶುಪಾಲ ಎಂ.ವಿ.ನೆಗಳೂರು, ಮುರಳಿ ಕಾಲೇಜಿನ ಪ್ರಾಂಶುಪಾಲ ಪ್ರಕಾಶ್, ಹರ್ಷ ಶಾಲೆಯ ಮುಖ್ಯ ಶಿಕ್ಷಕಿ ಪೂರ್ಣಿಮಾ, ಶಾಲಾ ಮಕ್ಕಳು ಹಾಗೂ ಪೋಷಕರು ಇದ್ದರು.