ಯುವ ಕಾಂಗ್ರೆಸ್ನಲ್ಲೀಗ ಚುನಾವಣೆ ಭರಾಟೆ
ದೊಡ್ಡಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಮತ್ತು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಚುನಾವಣಾ ಕಣ ರಂಗೇರಿದೆ. ಜನವರಿ ಮೊದಲ ವಾರ ಚುನಾವಣೆ ನಡೆಯಲಿದ್ದು ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದೆ.
ಲೋಕಸಭಾ ಕ್ಷೇತ್ರದ ಯುವ ಘಟಕದ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಿದ್ದು, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಲೋಕಸಭಾ ಕ್ಷೇತ್ರದ ಅಧ್ಯಕ್ಷ ಸ್ಥಾನಕ್ಕೆ ದೊಡ್ಡಬಳ್ಳಾಪುರದ ರಮ್ಯ ಸೇರಿದಂತೆ 8 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಅದೇ ರೀತಿ ವಿಧಾನಸಭಾ ಕ್ಷೇತ್ರ ವಿವಿಧ ಪದಾಧಿಕಾರಿಗಳ ಹುದ್ದೆಗೆ 15ಕ್ಕೂ ಹೆಚ್ಚು ಜನ ನಾಮಪತ್ರ ಸಲ್ಲಿಸಿದ್ದಾರೆ. ತಾಲೂಕಿನಲ್ಲಿ ಈ ಬಾರಿ ಮತದಾರರಿದ್ದಾರೆ. ಒಟ್ಟು 228
ಮತಗಟ್ಟೆಗಳ ಹಂತದಲ್ಲಿ ಆಯ್ಕೆಯಾಗಿರುವ ಪದಾಧಿಕಾರಿಗಳು ಮತದಾನ ಮಾಡಲಿದ್ದಾರೆ.
ಮತದಾರರ ವಿವರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 2850 ಮತದಾರರು, ದೇವನಹಳ್ಳಿಯ 258 ಬೂತ್ಗಳಲ್ಲಿ 2800, ಯಲಹಂಕದ 290 ಬೂತ್ಗಳಲ್ಲಿ 4200, ನೆಲಮಂಗಲದ 240 ಬೂತ್ಗಳಲ್ಲಿ 2400, ಹೊಸಕೋಟೆಯ 264 ಬೂತ್ಗಳಲ್ಲಿ 300, ಗೌರಿಬಿದನೂರಿನ 230 ಬೂತ್ಗಳಲ್ಲಿ 1000, ಚಿಕ್ಕಬಳ್ಳಾಪುರದ 224 ಮತಗಟ್ಟೆಗಳಲ್ಲಿ 1500 ಮತ್ತು ಬಾಗೇಪಲ್ಲಿಯ 240 ಮತಗಟ್ಟೆಗಳಲ್ಲಿ 1200 ಮತದಾರರಿದ್ದಾರೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಪಕ್ಷದ ಸಂಘಟನೆಯಲ್ಲಿ ಯುವ ಘಟಕದ ಪಾತ್ರ ನಿರ್ಣಾಯಕ ಎನಿಸಲಿದ್ದು, ಕುತೂಹಲ ಕೆರಳಿಸಿದೆ.