ವಿವೇಕವಾಣಿ ಸಾರ್ವಕಾಲಿಕ ಸತ್ಯ: ಮಾಜಿ ಸಚಿವ ಎ. ನಾರಾಯಣಸ್ವಾಮಿ
ಆನೇಕಲ್ಲು: ಸ್ವಾಮಿ ವಿವೇಕಾನಂದರು ತಮ್ಮ ಗುರಿ ಸಾಧನೆ, ಶೌರ್ಯ ಹಾಗೂ ಸಮಯೋಚಿತ ನಿರ್ಧಾರಕ್ಕಾಗಿ ಲೋಕ ವಿಖ್ಯಾತರಾಗಿದ್ದಾರೆ ಎಂದು ಮಾಜಿ ಸಚಿವ ಎ. ನಾರಾಯಣಸ್ವಾಮಿ ತಿಳಿಸಿದರು. ಸ್ವಾಮಿ ವಿವೇಕಾನಂದರ 150ನೇ ಜಯಂತಿ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಶೌರ್ಯ ಸಂದೇಶ ರಥ ಯಾತ್ರೆಯನ್ನು ಆನೇಕಲ್ಲು ಪಟ್ಟಣಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ಚಿಕಾಗೋ ವಿಶ್ವ ಧರ್ಮ ಸಮ್ಮೇಳನದಲ್ಲಿ ಸನಾತನ ಧರ್ಮದ ಸಂಸ್ಕೃತಿ, ಸಂಪ್ರದಾಯದ ಪರಿಚಾಯ ಮಾಡುವ ಮೂಲಕ ವಿಶ್ವಕ್ಕೆ ಭಾರತ ದೇಶದ ಮೌಲ್ಯವನ್ನು ಸಾರಿ ತಿಳಿಸಿದರು. ಅವರ ಎದೆ ಗುಂದದ ಶೌರ್ಯ, ಮುನ್ನುಗ್ಗುವ :ವಲ ವಾಕ್ಚಾತುರ್ಯವನ್ನು ಯುವ ಜನತೆ ಕರಗತ ಮಾಡಿಕೊಂಡು ಬಲಿಷ್ಠ ದೇಶ ನಿರ್ಮಾಣ ಮಾಡಬೇಕೆಂದರು. ಬೆಂಗಳೂರು ರಾಮಕೃಷ್ಣ ಮಠದ ಸ್ವಾಮಿ ತ್ಯಾಗೀಶ್ವರಾನಂದ ಸ್ವಾಮೀಜಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ವಿವೇಕಾನಂದರು ಎದುರಿಸಿದ ಘಟನಾವಳಿ ವಿವರಿಸಿ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮ,ಧರ್ಮ ಪ್ರೇಮ, ತಾಯಿ ತಂದೆಯರು ಹಾಗೂ ಗುರು ಹಿರಿಯರ ಮೇಲಿನ ಗೌರವ ಮೂಡುವಂತೆ ಪ್ರೇರಣೆ ನೀಡಿದರು. ಸ್ವಾಮಿ ಮಹಾವಾಕ್ಯಾನಂದ ಸ್ವಾಮೀಜಿ, ಪ್ರಕಾಶ್‌ರಾಜು, ಪುರಸಭಾ ಸದಸ್ಯರಾದ ನರಸಿಂಹರೆಡ್ಡಿ, ಕೆ.ನಾಗರಾಜು, ಎಂ. ನಾರಾಯಣಸ್ವಾಮಿ, ಬಿಜೆಪಿ ಟೌನ್ ಅಧ್ಯಕ್ಷ ಶಿವರಾಂ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.