ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನೆನಪಿನಂಗಳದಲ್ಲಿ ಸ್ನೇಹದಪ್ಪುಗೆ ಕವನ ಸಂಗ್ರಹ ಬಿಡುಗಡೆ

Vishwanath S
Updated On : 24 Dec 2013, 12:50 pm

ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡಬೆಳವಂಗಲ ಹೋಬಳಿ ಚಿಕ್ಕಹೆಜ್ಜಾಜಿ ಗ್ರಾಮದ ವಿದ್ಯಾರ್ಥಿನಿ ರಶ್ಮಿ ಬರೆದಿರುವ ನೆನಪಿನಂಗಳದಲ್ಲಿ ಸ್ನೇಹದಪ್ಪುಗೆ ಕವನ ಸಂಕಲನದ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಕವನ ಸಂಗ್ರಹವನ್ನು ನಾಟಕಕಾರ ಗೋಪಾಲ ವಾಜಪೇಯಿ ಬಿಡುಗಡೆ ಮಾಡಿದರು. ಅವರು ಮಾತನಾಡಿದ ಇಂದಿನ ಯುವ ಜನಾಂಗದ ಹಲವು ವಿಚಾರಗಳಲ್ಲಿ ಹಾದಿ ತಪ್ಪುವ ಅಪಾಯಗಳಿವೆ. ಇಂತಹ ಸಂದರ್ಭದಲ್ಲಿ ಸೃಜನಶೀಲ ಚಟುವಟಿಕೆಗಳಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಜನರ ಸಂಖ್ಯೆ ತೀರ ವಿರಳ. ಸಾಹಿತ್ಯವನ್ನು ಹವ್ಯಾಸವಾಗಿ ತೆಗೆದುಕೊಂಡು ಸಾಹಿತ್ಯ ಕೃಷಿಗಿಳಿಯುವ ಮನಸ್ಸುಗಳು ಸಾಮಾಜಿಕ ಆಶಾಭಾವನೆಯನ್ನು ಉಂಟುಮಾಡುತ್ತವೆ ಎಂದರು.
 ಬೆಂಗಳೂರು ನಗರ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗರಾಜು, ಶಿಕ್ಷಕ ಟಿ.ಅರುಣ್‌ಕುಮಾರ್, ನಿವೃತ್ತ ಅಧ್ಯಾಪಕ ಕೆ.ಸತ್ಯನಾರಾಯಣರಾವ್ ಮತ್ತಿತರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಚಿಕ್ಕಹೆಜ್ಜಾಜಿ ಗ್ರಾಮದ ಶ್ರೀರಾಮ ದೇವಾಲಯದಲ್ಲಿ ಲೋಕಕಲ್ಯಾಣಾರ್ಥ ಶ್ರೀರಾಮ ಲಕ್ಷ ತಾರಕ ಹೋಮ ಧಾರ್ಮಿಕ ಕಾರ್ಯಕ್ರಮವೂ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement