ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರೈತರು ಆಧುನಿಕ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಲಿ

Vishwanath S
Updated On : 24 Dec 2013, 12:50 pm

ರಾಮನಗರ: ರೈತರು ಆಧುನಿಕ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಬೇಕು ಎಂದು ಭಾರತೀಯ ಕಿಸಾನ್ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಗಂಗಾಧರ ಕಾಸರಘಟ್ಟ ಕರೆ ನೀಡಿದರು.  ಮಾಗಡಿ ತಾಲೂಕಿನ ಚಂದೂರಾಯನಹಳ್ಳಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ರೇಷ್ಮೆ ಇಲಾಖೆಯ ಸಹಯೋಗದೊಂದಿಗೆ ಸೋಮವಾರ ಆಯೋಜಿಸಿದ್ದ ಕೃಷಿ ತಂತ್ರಜ್ಞಾನ ಸಪ್ತಾಹ-2013 ಹಾಗೂ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  ಅತಿಯಾದ ರಾಸಾಯನಿಕ ಗೊಬ್ಬರವನ್ನು ಬಳಸುವುದರಿಂದ ಭೂಮಿ ಬರಡಾಗುವ ಆತಂಕವಿದೆ. ದೇಶೀ ಪದ್ಧತಿಯಲ್ಲಿ ಆಧುನೀಕರಣ ಅಳವಡಿಸಿಕೊಳ್ಳಬೇಕು. ಗೋಸಂಪತ್ತನ್ನು ಸಂರಕ್ಷಿಸಬೇಕು ಹಾಗೂ ತಿಪ್ಪೆ ಗೊಬ್ಬರವನ್ನು ಕೃಷಿಗೆ ಬಳಸಿಕೊಳ್ಳಬೇಕು. ಪರಿಸರ ಸಂರಕ್ಷಣೆಯ ಜತೆಗೆ ಆರೋಗ್ಯ, ಆರ್ಥಿಕವಾಗಿ ಸಬಲೀಕರಣರಾಗಬಹುದು ಎಂದರು.  ಕೃಷಿ ವಿಜ್ಞಾನ ಕೇಂದ್ರಗಳಿಂದ ಆಯೋಜಿಸುವ ತರಬೇತಿಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದು ಗೃಹ ವಿಜ್ಞಾನಿ ಡಾ.ಲತಾ ಆರ್.ಕುಲಕರ್ಣಿ ತಿಳಿಸಿದರು. ಕೃಷಿ ಸಪ್ತಾಹದ ಉದ್ದೇಶಗಳನ್ನು ರೈತರಿಗೆ ಮನವರಿಕೆ ಮಾಡಿಕೊಟ್ಟರು. ಮಾಗಡಿಯ ರಾಮಕೃಷ್ಣ ಅವರಿಗೆ ಮೈಸೂರು ಬಿತ್ತನೆ ತಳಿಯ ಅತ್ಯುತ್ತಮ ರೇಷ್ಮೆ ಕೃಷಿಕ ಪ್ರಶಸ್ತಿ-2013 ನೀಡಿ ಗೌರವಿಸಲಾಯಿತು.  ರೇಷ್ಮೆ ಮಂಡಳಿ ವಿಜ್ಞಾನಿ ಡಾ.ಹೇಮಾನಂದರೆಡ್ಡಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಕೆ.ಎಚ್.ನಾಗರಾಜು, ಕೃಷಿ ವಿಜ್ಞಾನಿಗಳಾದ ಡಾ.ಬಿ.ಜಿ.ಹನುಮಂತರಾಯ, ಡಾ.ಎಸ್.ಕಮಲಾಬಾಯಿ, ಡಾ.ಕೇಶವರೆಡ್ಡಿ,  ಡಾ.ಸಯ್ಯದ್ ಮಜರ್ ಅಲಿ, ಕೆ.ಆರ್.ಶ್ಯಾಮಸುಂದರ್, ಎಸ್.ಸಿ.ರಂಗನಾಥ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement