27ರಿಂದ ಆನಂದದ ಅಲೆಗಳು ಯೋಗ ಶಿಬಿರ
ರಾಮನಗರ: ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ನಗರದಲ್ಲಿ ಡಿ.27ರಿಂದ ಮೂರು ದಿನಗಳ ಕಾಲ ಆನಂದದ ಅಲೆಗಳು ಎಂಬ ಹೆಸರಿನಲ್ಲಿ ಯೋಗ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಯೋಗ ಶಿಕ್ಷಕ ರವಿಪ್ರಕಾಶ್ ತಿಳಿಸಿದರು.
ಸಂತೋಷ ಮತ್ತು ನೆಮ್ಮದಿ ಎಂಬುದು ಪ್ರತಿಯೊಬ್ಬರ ಜನ್ಮಸಿದ್ಧ ಹಕ್ಕು ಎಂಬ ಧ್ಯೇಯದೊಂದಿಗೆ ಹಮ್ಮಿಕೊಂಡಿರುವ ಶಿಬಿರದಲ್ಲಿ ನುರಿತ ಶಿಕ್ಷಕರಿಂದ ಶಕ್ತಿಶಾಲಿ ಉಸಿರಾಟದ ಪ್ರಕ್ರಿಯೆ ಹಾಗೂ ಪರಸ್ಪರ ಸಂವಾದದ ಪ್ರಕ್ರಿಯೆಗಳನ್ನು ಬೋಧಿಸಲಾಗುವುದು ಎಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಸುದರ್ಶನ ಕ್ರಿಯೆಯ ಮೂಲಕ ಲಯಬದ್ಧವಾದ ಉಸಿರಾಟ ಪ್ರಕ್ರಿಯೆ, ಮನಸ್ಸು ಮತ್ತು ಆತ್ಮಗಳನ್ನು ಲಯಕ್ಕೆ ತರುವುದು. ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸವ ಭಂಗಿಗಳನ್ನು ಹೇಳಿಕೊಡಲಾಗುವುದು. ಯೋಗ, ಪ್ರಾಣಾಯಾಮ ಧ್ಯಾನದ ಮೂಲಕ ಪರಂಪರೆ ಮತ್ತು ಪ್ರಾಯೋಗಿಕ ಮಿಶ್ರಣದೊಂದಿಗೆ ಸರಳ ರೀತಿಯಲ್ಲಿ ಚಟುವಟಿಕೆಗಳನ್ನು ತಿಳಿಸಿಕೊಡಲಾಗುವುದು ಎಂದರು.
ಇಂದಿನ ಒತ್ತಡದ ಜೀವನದಲ್ಲಿ ಉತ್ತಮ ಆರೋಗ್ಯ ವೃದ್ಧಿ ಮತ್ತು ಜೀವನ ಕೌಶಲ್ಯ ವೃದ್ಧಿಗಾಗಿ ಇಂತಹ ಕಾರ್ಯಾಗಾರಗಳಲ್ಲಿ ಭಾಗವಹಿಸುವ ಮೂಲಕ ಪರಿಹಾರಗಳನ್ನು ಕಂಡುಕೊಳ್ಳಬೇಕು. ಆಬಾಲ ವೃದ್ಧರಾದಿಯಾಗಿ ಎಲ್ಲರಿಗೂ ಯೋಗ್ಯವಾಗುವಂತಹ ಚಟುವಟಿಕೆಗಳನ್ನು ಕಲಿಸಿಕೊಡಲಾಗುವುದು ಎಂದು ಮುಖ್ಯಸ್ಥ ರವಿಕುಮಾರ್ ಗೌಡ ತಿಳಿಸಿದರು.
ಶಿಬಿರವು ನಗರದ ಎಂ.ಜಿ.ರಸ್ತೆಯ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಡಿ.27ರಿಂದ 29ರವರೆಗೆ ಬೆಳಗ್ಗೆ 6ರಿಂದ 8.30ರವರೆಗೆ ಮತ್ತು ಸಂಜೆ 6 ರಿಂದ 8.30ರವರೆಗೆ ಎರಡು ಬ್ಯಾಚ್‌ಗಳಲ್ಲಿ ನಡೆಯಲಿದೆ. 29ರ ಭಾನುವಾರ ಬೆಳಗ್ಗೆ 8 ರಿಂದ ಮಧ್ಯಾಹ್ನ 12ರವರೆಗೆ ನಡೆಯಲಿದೆ. ಶಿಬಿರದಲ್ಲಿ ಭಾಗವಹಿಸುವವರು ರು.700 ಪಾವತಿಸಿ ಸಂಸ್ಥೆಯ ಆಜೀವ ಸದಸ್ಯರಾಗಿ ನೋಂದಾಯಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು. ಗೋಷ್ಠಿಯಲ್ಲಿ ಆರ್ಟ್ ಆಫ್ ಲಿವಿಂಗ್‌ನ ಮಾಧ್ಯಮ ಕೇಂದ್ರದ ಮುಖ್ಯಸ್ಥ ಶ್ರೀಕುಮಾರ್, ಕಿರಣ್ ಪಟುಳೆ ಹಾಜರಿದ್ದರು.