ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜನಪರ ಕಾಳಜಿಯ ವ್ಯಕ್ತಿಗಳನ್ನು ಆಯ್ಕೆ ಮಾಡಿ

Rashmi Kasaragodu
Updated On : 25 Dec 2013, 2:25 am

ಕನಕಪುರ: ಯಾವುದೇ ಗುಂಪು, ಒಳಪಂಗಡಗಳನ್ನು ಪರಿಗಣಿಸದೆ ಜನಪರ ಕಾಳಜಿಯ ರೈತ  ಸಮುದಾಯದ ಹಿತಕಾಯುವ  ಮುಖಂಡರನ್ನು ಒಕ್ಕಲಿಗರ ಸಂಘಕ್ಕೆ ಮತದಾರರು ಆರಿಸಬೇಕು ಎಂದು ಜೆಡಿಎಸ್ ಮುಖಂಡ, ರಾಜ್ಯ ತೆಂಗುನಾರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಡಿ.ಎಂ. ವಿಶ್ವನಾಥ್ ಹೇಳಿದ್ದಾರೆ. ಅವರು ಕನಕಪುರದ ಪರಿವೀಕ್ಷಣಾ ಮಂದಿರದಲ್ಲಿ ಒಕ್ಕಲಿಗ ಸಂಘದ ಮತದಾರರು ಹಾಗೂ ಮುಖಡರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಜೆಡಿಎಸ್ ಮುಖಂಡರಾದ ಕೋಡಿಹಳ್ಳಿ ಕೃಷ್ಣಪ್ಪ, ಬಿ.ಎಸ್.ಗೌಡ, ಬಾಲನರಸಿಂಹ, ಹಲಸೂರು ಸಿದ್ಧರಾಜು, ಸ್ಟುಡಿಯೋ ಚಂದ್ರು, ಕಬ್ಬಾಳೇಗೌಡ, ಗ್ರಾಪಂ ಅಧ್ಯಕ್ಷ ಚಂದ್ರಶೇಖರ್, ಜಿಪಂ ಮಾಜಿ ಸದಸ್ಯ ಭುಜಂಗಯ್ಯ, ತಮ್ಮಯ್ಯಣ್ಣ, ಈರಯ್ಯ ಪಾಲ್ಗೊಂಡಿದ್ದರು. ಯಾವುದೇ ಗುಂಪಿನಲ್ಲಿ ಗುರುತಿಸಿಕೊಂಡಿದ್ದರೂ ಯಾವುದೇ ಪಕ್ಷದ ಬೆಂಬಲ ಹೊಂದಿದ್ದರೂ ಒಕ್ಕಲಿಗ ಸಮುದಾಯಕ್ಕೆ ಶ್ರಮಿಸುತ್ತಿರುವ ಪ್ರಮುಖರಾದ ಅ. ದೇವೇಗೌಡ, ಡಾ.ಚಿಕ್ಕಮೊಗ, ಡಾ.ಅಪ್ಪಾಜಿಗೌಡ,ಪ್ರೊ.ಮಲ್ಲಯ್ಯ, ಡಾ. ನಿಸರ್ಗ, ಜವರೇಗೌಡ, ನೀಲಕಂಠು, ಮುನೇಗೌಡ ಮೊದಲಾದವರ ನಾಯಕತ್ವ ಸಂಘಕ್ಕೆ ಅನಿವಾರ್ಯವಾಗಿದೆ ಎಂದು ವಿಶ್ವನಾಥ್ ಅಭಿಪ್ರಾಯ ಪಟ್ಟರು.
ಇಂದು ಆರೋಗ್ಯ ತಪಾಸಣೆ ಶಿಬಿರ
ನೆಲಮಂಗಲ: ತಾಲೂಕಿನ ತ್ಯಾಮಗೊಂಡ್ಲುವಿನ ವೀಣಾ ಮಕ್ಕಳ ಮಂದಿರದಲ್ಲಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ 89ನೇ ಜನ್ಮ ದಿನಾಚರಣೆಯ ಅಂಗವಾಗಿ  ಸಪ್ತಗಿರಿ ಆಸ್ಪತ್ರೆ, ಕಿಡ್ನಿಸ್ಟೋನ್ ಆಸ್ಪತ್ರೆ ಮತ್ತು ತ್ಯಾಮಗೊಂಡ್ಲು ಹೋಬಳಿ ಭಾಜಪ ಶಕ್ತಿಕೇಂದ್ರದ ಸಹಯೋಗದೊಂದಿಗೆ ಡಿ. 25ರ ಬುಧವಾರ ಬೆಳಿಗ್ಗೆ 9-30 ರಿಂದ ಮಧ್ಯಾಹ್ನ 2-00 ರವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ. ಭಾಜಪ ರಾಜ್ಯ ಖಜಾಂಚಿ ಎಚ್.ಎಸ್. ಗೋಪಿನಾಥ್ ಉದ್ಘಾಟಿಸಲಿದ್ದು, ಅಧ್ಯಕ್ಷ ಸಿ.ಎಲ್.ಜಗದೀಶ್ ಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎಂ.ವಿ. ನಾಗರಾಜು, ಭಾಜಪ ಜಿಲ್ಲಾ ಉಪಾಧ್ಯಕ್ಷ ಟಿ.ಪಿ. ಸುಬ್ಬರಾಮಯ್ಯ,  ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕಾಂತರಾಜು, ಜಿಲ್ಲಾ ಖಜಾಂಚಿ ರಾಮಕೃಷ್ಣಪ್ಪ, ಸಪ್ತಗಿರಿ ಆಸ್ಪತ್ರೆ  ಆಡಳಿತಾಧಿಕಾರಿ ಶಿವರಾಮ್, ಕಾವ್ಯ ಬಿಲ್ಡರ್ಸ್ ಮಾಲೀಕ ಆರ್. ಭೂಪಾಲ್ ರೆಡ್ಡಿ ಆಗಮಿಸಲಿದ್ದಾರೆ ಎಂದು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement