ನಾರಾಯಣಸ್ವಾಮಿಗೆ ಅಂಬೇಡ್ಕರ್ ಸೇವಾಶ್ರೀ ಪ್ರಶಸ್ತಿ
ದೊಡ್ಡಬಳ್ಳಾಪುರ: ಇಲ್ಲಿನ ರಾಜ್ಯ ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಓ.ಎಂ. ನಾರಾಯಣಸ್ವಾಮಿ ಅವರಿಗೆ ದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಶ್ರೀ ಪ್ರಶಸ್ತಿ ನೀಡಿದೆ. ಅಕಾಡೆಮಿ ಆಯೋಜಿಸಿದ್ದ 29ನೇ ದಲಿತ ಸಾಹಿತ್ಯ ಬರೆಹಗಾರರ ಸಮ್ಮೇಳನದಲ್ಲಿ ಅಕಾಡೆಮಿ ಅಧ್ಯಕ್ಷ ಡಾ.ಎಸ್.ಪಿ. ಸುಮನಕ್ಷರ್ ಈ ಪ್ರಶಸ್ತಿಯನ್ನು ನೀಡಿದರು. ದಲಿತ ಪರ ಹೋರಾಟಗಳಲ್ಲಿ ಕಳೆದ ಹಲವು ವರ್ಷಗಳಿಂದ ಸಕ್ರಿಯವಾಗಿ ತೊಡಗಿರುವ ನಾರಾಯಣಸ್ವಾಮಿ, ಹಲವು ಹೋರಾಟಗಳಲ್ಲೂ ಭಾಗಿಯಾಗಿದ್ದರು. ನಾರಾಯಣಸ್ವಾಮಿ ಅವರನ್ನು ತಾಲೂಕಿನ ಹಲವು ದಲಿತ ಸಂಘಟನೆಗಳು ಅಭಿನಂದಿಸಿವೆ.