ವಿದ್ಯಾರ್ಥಿಗಳು ಸೇವಾ ಮನೋಭಾವ ರೂಢಿಸಿಕೊಳ್ಳಲಿ
ಕ.ಪ್ರ.ವಾರ್ತೆ ಕನಕಪುರ ಡಿ.24
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸೇವಾಮನೋಭಾವನೆಯನ್ನು ರೂಢಿಸಿಕೊಂಡು ಮುಕ್ತ ಮನಸ್ಸಿನಿಂದ ಒಳ್ಳೆಯ ವಿಚಾರಗಳನ್ನು ಸ್ವೀಕರಿಸಬೇಕು. ಉದಾತ್ತ ಚಿಂತನೆ ಆಲೋಚನೆಗಳನ್ನು ಬೆಳೆಸಿಕೊಳ್ಳಬೇಕು, ಕನಸುಗಳನ್ನು ನನಸಾಗಿಸುವತ್ತ ಶ್ರಮವಹಿಸಿ ಶ್ರದ್ಧೆಯಿಂದ ಯಶಸ್ಸನ್ನು ಗಳಿಸಬೇಕು ಎಂದು ಪ್ರಾಂಶುಪಲರಾದ ಪ್ರೊ.ರಂಗಸ್ವಾಮಿಗೌಡ ಹೇಳಿದ್ದಾರೆ.
ಅವರು ಕನಕಪುರ ತಾಲೂಕು ಕೋಡಿಹಳ್ಳಿಯ ಶ್ರೀಮತಿ ಗೌರಮ್ಮ ಕೆಂಪೇಗೌಡ ಸರ್ಕಾರಿ ಪದವಿ ಕಾಲೇಜಿನ ಎನ್‌ಎಸ್‌ಎಸ್ ಶಿಬಿರದ ಸಮಾರೋಪ ಭಾಷಣ ಮಾಡಿದರು. ಸಮಾರಂಭದ ಉದ್ಘಾಟನೆಯನ್ನು ಖಜಾನಾಧಿಕಾರಿ ಸುಜಾತಾರಾವ್ ನೆರವೇರಿಸಿದರು. ಪ್ರಾಂಶುಪಾಲ ಪ್ರೊ.ಎಲ್ಲಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.
ಎಂಟುದಿನಗಳ ಕಾಲ ನಡೆದ ರಾಷ್ಟ್ರೀಯ ಸ್ವಯಂಸೇವಾ ಶಿಬಿರದಲ್ಲಿ 50 ಮಂದಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶ್ರಮದಾನದ ಮೂಲಕ ಶಾಲಾ ಆವರಣ ಸ್ವಚ್ಛ, ಕ್ರೀಡಾಂಗಣ ನಿರ್ಮಾಣ, ಸಂಪಿನ ಶುದ್ಧೀಕರಣ, ಆರು ಅರಳೀಕಟ್ಟೆಗಳ ನಿರ್ಮಾಣ, ಗಿಡನೆಡುವ ಕಾರ್ಯಕ್ರಮಗಳು ನಡೆದವು. ಪ್ರತಿನಿತ್ಯವೂ ತಜ್ಞರಿಂದ ಉಪನ್ಯಾಸ, ಸಾಕ್ಷ್ಯಚಿತ್ರ ಪ್ರದರ್ಶನ, ವ್ಯಾಯಾಮ, ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಿರುನಾಟಕ, ಪ್ರತಿಭಾ ಪ್ರದರ್ಶನಗಳು ವಿದ್ಯಾರ್ಥಿಗಳಿಗೆ ವಿನೂತನ ಅನುಭವ ನೀಡಿದವು ಎಂದು ಶಿಬಿರಾಧಿಕಾರಿ ಪ್ರೊ.ಎನ್.ಪಿ.ಕೃಷ್ಣಮೂರ್ತಿ ತಿಳಿಸಿದರು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಪ್ರಾಂಶುಪಾಲ ಡಾ.ನೀಲಮ್ಮ, ಪ್ರೊ.ಗೋಪಾಲರೆಡ್ಡಿ, ಪ್ರೊ.ಸಿದ್ದಪ್ಪ, ಪ್ರೊ.ವೃಷಭೇಂದ್ರಮೂರ್ತಿ, ಪ್ರೊ.ಎ.ಸಿ. ಚೂಡಲಿಂಗಯ್ಯ, ಪ್ರೊ. ವಾಣಿ, ಪ್ರೊ.ರಮ್ಯಾ, ಗ್ರಾಪಂ ಸದಸ್ಯ ಚಲುವಯ್ಯ ಆಗಮಿಸಿದ್ದರು. ಶಿಬಿರಾಧಿಕಾರಿ ಕೃಷ್ಣಮೂರ್ತಿ ಸ್ವಾಗತಿಸಿದರು. ಉಪನ್ಯಾಸಕ ಮಂಜುನಾಥ್ ನಿರೂಪಿಸಿದರು. ಸಹಶಿಬಿರಾಧಿಕಾರಿ ಎ.ಸಿ. ಚೂಡಲಿಂಗಯ್ಯ ವಂದಿಸಿದರು.