ತಾಲೂಕು ಮಟ್ಟಕ್ಕೆ ಆಯ್ಕೆ
ವಿಜಯಪುರ: ಪಟ್ಟಣದ ಜೆಕೆಬಿಎಂಎಸ್ ಶಾಲೆಯಲ್ಲಿ ನಡೆದ 2013-14ನೇ ಸಾಲಿನ ಕ್ಲಷ್ಟರ್ ಹಂತದ ಕಲಿಕೋತ್ಸವದಲ್ಲಿ ಎಂಪಿಜಿಎಸ್ ಶಾಲೆಯ ಮಕ್ಕಳು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸ್ವರಭಾರಯುಕ್ತ ಓದಿನಲ್ಲಿ ಅನುಶ್ರೀ, ಕಂಠಪಾಠ ಸ್ಪರ್ಧೆಯಲ್ಲಿ ಎನ್.ಚಂದು, ಅಳತೆ ಮತ್ತು ತೂಕ ಹೇಳುವಿಕೆಯಲ್ಲಿ ಉಮಾರಾಣಿ, ಎಸ್ಕೆಐಟಿ ಸ್ಪರ್ಧೆಯಲ್ಲಿ ಕಾವ್ಯ ಮತ್ತು ತಂಡ, ರೀಡಲ್ಸ್ನಲ್ಲಿ ಅಂಜಿತಾ, ಇಂಗ್ಲಿಷ್ ಪತ್ರಲೇಖನ ಸ್ಪರ್ಧೆಯಲ್ಲಿ ಜಾನ್ಸಿ, ಸ್ಟೆಲ್ಲಿಂಗ್ ಗೇಮ್ನಲ್ಲಿ ಚೈತ್ರಾ, ಇಂಗ್ಲಿಷ್ ಸ್ಟೋರಿ ಟೆಲ್ಲಿಂಗ್ ಸ್ಪರ್ಧೆಯಲ್ಲಿ ಗೌತಮಿ ವಿಜೇತರಾಗಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳನ್ನು ಮುಖ್ಯ ಶಿಕ್ಷಕ ಮನೋಹರ್, ಸಹ ಶಿಕ್ಷಕರು ಮತ್ತು ಶಾಲಾ ಅಭಿವೃದ್ಧಿ ಸಂಸ್ಥೆಯ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.
ನಾಳೆ ದೇವನಹಳ್ಳಿ ಲಯನ್ಸ್ ಸಂಸ್ಥೆಯಲ್ಲಿ ರಕ್ತದಾನ ಶಿಬಿರ
ದೇವನಹಳ್ಳಿ: ಇಲ್ಲಿನ ಲಯನ್ಸ್ ಮತ್ತು ಲಯನೆಸ್ ಸಂಸ್ಥೆ, ಲಯನ್ಸ್ ಸೇವಾ ಪ್ರತಿಷ್ಠಾನ ಹಾಗೂ ದೇವನಹಳ್ಳಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಸಂಯುಕ್ತ ಆಶ್ರಯದಲ್ಲಿ ಡಿ.27 ರಂದು ಲಯನ್ಸ್ ಸೇವಾ ಭವನದಲ್ಲಿ ಬೆಳಗ್ಗೆ 9 ರಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಸಂಘದ ಆಧ್ಯಕ್ಷ ಆರ್.ನಾಗರಾಜಯ್ಯ ತಿಳಿಸಿದ್ದಾರೆ.
ಈ ರಕ್ತದಾನ ಶಿಬಿರದಲ್ಲಿ ಜೈ ಭುವನೇಶ್ವರಿ ಆಟೋ ಮಾಲೀಕರು ಮತ್ತು ಚಾಲಕರು ಭಾಗವಹಿಸಲಿದ್ದಾರೆ ಎಂದು ಕ್ರೀಡಾ ಸಂಘದ ಅಧ್ಯಕ್ಷ ಬಿ.ದೇವರಾಜ್ ತಿಳಿಸಿ 18 ವರ್ಷ ಮೇಲ್ಪಟ್ಟ ಎಲ್ಲ ಆರೋಗ್ಯವಂತ ಯುವಕ ಯುವತಿಯರು ತಮ್ಮ ರಕ್ತದಾನ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.