ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮಧುಮೇಹ ತಪಾಸಣೆ ಶಿಬಿರ

Rashmi Kasaragodu
Updated On : 27 Dec 2013, 2:10 am

ದೊಡ್ಡಬಳ್ಳಾಪುರ: ಇಲ್ಲಿನ ಲಯನೆಸ್ ಕ್ಲಬ್ ಮತ್ತು ಎಲ್ವಿ ಆಸ್ಪತ್ರೆ ನೇತೃತ್ವದಲ್ಲಿ ಮಧುಮೇಹ ಜಾಗೃತಿ ಉಪನ್ಯಾಸ ಮತ್ತು ತಪಾಸಣೆ ಶಿಬಿರ ಡಿ.27ರ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಲಯನ್ಸ್ ಕ್ಲಬ್ನಲ್ಲಿ ನಡೆಯಲಿದೆ.
ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಡಾ.ಜಿ.ಬಾಲಚಂದರ್, ಎಲ್ವಿ ಆಸ್ಪತ್ರೆಯ ಡಾ.ಮೂರ್ತಿಕುಮಾರ್ ಮತ್ತಿತರು ಶಿಬಿರದ ನೇತೃತ್ವ ವಹಿಸಲಿದ್ದಾರೆ.
ದ್ವಿಚಕ್ರವಾಹನ ಕಳ್ಳರ ಸೆರೆ
ಚನ್ನಪಟ್ಟಣ:  ದ್ವಿಚಕ್ರವಾಹನ ಕಳ್ಳರನ್ನು ಸೆರೆಹಿಡಿದು ನಾಲ್ಕು ವಾಹನಗಳನ್ನು ವಶಕ್ಕೆ ತೆಗೆದು ಕೊಳ್ಳುವಲ್ಲಿ ಪುರ ಪೊಲೀಸ್ ಠಾಣೆ ಸಿಬ್ಬಂದಿ ಸಫಲ ಗೊಂಡಿದ್ದಾರೆ. ರಾಮನಗರ ತಾಲೂಕು ತಿಮ್ಮಯ್ಯನದೊಡ್ಡಿಗ್ರಾಮದ ಮಹದೇವ(24) ಬಂಧಿತ ಆರೋಪಿ.
ಬುಧವಾರ ಪಟ್ಟಣದ ಸಿಪಿಟಿಗಾರ್ಡನ್ ಬಳಿ ಪುರ ಪೊಲೀಸ್ ಠಾಣೆ ಸಿಬ್ಬಂದಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈತ ಯಾವುದೇ ದಾಖಲೆ ಇಲ್ಲದೆ ದ್ವಿಚಕ್ರವಾಹನದಲ್ಲಿ ಬಂದು ಪೊಲೀಸರ ಸೆರೆ ಸಿಕ್ಕಿದ್ದಾನೆ. ವಶಕ್ಕೆ ತೆಗೆದು ಕೊಂಡು ವಿಚಾರಣೆ ನಡೆಸಿದಾಗ ಈತ ಬೆಂಗಳೂರು, ಬಿಡದಿ ಸೇರಿದಂತೆ ವಿವಿಧೆಡೆ ದ್ವಿಚಕ್ರವಾಹನ ಕಳವು ಮಾಡಿರುವ ಸಂಗತಿ ತಿಳಿದು ಬಂದಿದೆ.  ಈ ಸಂಬಂಧ ಪುರಠಾಣೆ ಪಿಎಸ್ಐ ವಿಜಯ್ ಕುಮಾರ್ ಮತ್ತು ಸಿಬ್ಬಂದಿ ತನಿಖೆ ಕೈಗೊಂಡಿದ್ದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement