ಸಾಹು ಮಹರಾಜ್ ಪುಸ್ತಕ ಬಿಡುಗಡೆ
ಆನೇಕಲ್ಲು: ಛತ್ರಪತಿ ಸಾಹು ಮಹರಾಜ್ ಕುರಿತು ಕಾತ್ಯಾಯನಿ ಅವರ ತೆಲುಗು ಕೃತಿಯನ್ನು ನಂಜುಂಡಾಚಾರಿ ಅವರು ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ. ಪುಸ್ತಕ ಬಿಡುಗಡೆ ಸಮಾರಂಭವನ್ನು ಡಿ. 29 ಭಾನುವಾರ ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಾಹಿತಿ ಹಾಗೂ ಪ್ರಕಾಶಕ ಜಿಗಣಿ ಶಂಕರ್ ತಿಳಿಸಿದ್ದಾರೆ.
ಬೆಂಗಳೂರು ದಕ್ಷಿಣ ಜಿಗಣಿ ಲಿಂಕ್ ರಸ್ತೆ, ಕಾವೇರಪ್ಪ ಸಭಾಂಗಣದಲ್ಲಿ ಏರ್ಪಡಿಸಿರುವ ಕಾರ್ಯಕ್ರಮವನ್ನು ಕವಿ-ಚಿಂತಕ ಎಸ್. ಜೆ. ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಜಿಗಣಿ ಶಂಕರ್ ಪ್ರಾಸ್ಥಾವಿಕ ನುಡಿಯಲಿದ್ದಾರೆ. ಇದೇ ವೇದಿಕೆಯಲ್ಲಿ ರಸಋಷಿ ಕುವೆಂಪು ಅವರ 109ನೇ ಜಯಂತಿ ಹಾಗೂ ಕುವೆಂಪು ಕಾವ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಹೊಸ ಪೀಳಿಗೆಯ ಕವಿಗಳಿಂದ ಕಾವ್ಯ ವಾಚನ ಇರುತ್ತದೆ ಎಂದು ಜೇನುಗೂಡು ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆಯ ಮಹೇಶ್ ಊಗಿನಹಳ್ಳಿ ತಿಳಿಸಿದ್ದಾರೆ.