ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಜಾನಪದ ಕಲೆ ಉಳಿಸುವತ್ತ ಚಿಂತಿಸಿ'

Mainashree
Updated On : 28 Dec 2013, 12:22 pm

ನೆಲಮಂಗಲ: ಗ್ರಾಮೀಣ ಪ್ರದೇಶದಲ್ಲೂ ಕಲೆಯ ಆರಾಧಕರಲ್ಲಿ ಕೊರತೆ ಎದುರಾಗಿದ್ದು ಸಾಮಾಜಿಕ ಕಾಳಜಿಯಿಂದ ಕಲೆ ಮತ್ತು ಜಾನಪದ ಕಲೆಯನ್ನು ಉಳಿಸುವತ್ತ ಚಿಂತಿಸುವ ಅಗತ್ಯವಿದೆ ಎಂದು ಹಿರಿಯ ರಂಗ ಕಲಾವಿದ ಬಿ.ಆರ್.ತಿಮ್ಮರಾಜು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಪಟ್ಟಣದ ಶ್ರೀ ಬಸವಣ್ಣ ದೇವರ ಮಠದಲ್ಲಿ ತಾಲ್ಲೂಕು ರಂಗಭೂಮಿ ಕಲಾವಿದರ ಸಂಘವು ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು 2ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂಘದ ಅಧ್ಯಕ್ಷ ಕೆ.ವಿ.ರುದ್ರಪ್ಪ ಮಾತನಾಡಿ ತಾಲೂಕಿನಲ್ಲಿ ರಂಗ ಕಲಾವಿದರಿಗೇನೂ ಕೊರತೆಯಿಲ್ಲ. ಆದರೆ ಅವರಿಗೆ ಪ್ರೋತ್ಸಾಹದಾಯಕ ವಾತಾವರಣದ ಕೊರತೆಯಿದ್ದು ತ್ವರಿತವಾಗಿ ಸರ್ಕಾರವು ತಾಲೂಕಿನ ರಂಗ ಕಲಾವಿದರು ವಿವಿಧ ಪ್ರಾಕಾರಗಳ ಕಲೆಯನ್ನು ಪ್ರದರ್ಶನ ಮತ್ತು ಸಾಕಾರಕ್ಕಾಗಿ ರಂಗಮಂದಿರವನ್ನು ನಿರ್ಮಿಸಿಕೊಡಬೇಕು ಹಾಗೂ ಅದಕ್ಕಾಗಿ ಉಚಿತ ನಿವೇಶನವೊಂದನ್ನು ಮಂಜೂರು ಮಾಡಿಕೊಡಬೇಕೆಂದು ಮನವಿ ಮಾಡಿದರು.
ಹಲವಾರು ಹಿರಿಯ ರಂಗಭೂಮಿ ಕಲಾವಿದರನ್ನು ಪುರಸ್ಕರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ರಂಗಗೀತೆಗಳ ಗಾಯನ ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಲಾ ಪ್ರದರ್ಶನ ನಡೆಯಿತು.
ತಾ.ಪಂ.ಸದಸ್ಯೆ ಅಶ್ವತ್ಥಮ್ಮ, ಸಂಘದ ಉಪಾಧ್ಯಕ್ಷ ಜಿ.ಎಂ.ರುದ್ರಾರಾಧ್ಯ, ಸಾಂಸ್ಕೃತಿಕ ರೂವಾರಿ ಸುಶೀಲಮ್ಮ, ಹಿರಿಯ ರಂಗ ನಿರ್ದೇಶಕರಾದ ಗೋಪಾಲ ಕೃಷ್ಣಮೂರ್ತಿ, ಕೆ.ಬಿ.ಚಂದ್ರಶೇಖರ್, ಆರ್.ಗಂಗರಾಜು, ಸಂಘಟನಾ ಕಾರ್ಯದರ್ಶಿ ಬಿ.ಜಿ.ಕೃಷ್ಣಯ್ಯ, ಜಂಟಿ ಕಾರ್ಯದರ್ಶಿ ಜಯರಾಮಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement