ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸುದ್ದಿ ಸಂಕ್ಷೇಪ

Mainashree
Updated On : 28 Dec 2013, 12:23 pm

ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ಶಿಶು
ರಾಮನಗರ: ನಗರದ ಗೀತಾಮಂದಿರ ಬಡಾವಣೆಯಲ್ಲಿ ಅ.9ರಂದು ಪತ್ತೆಯಾಗಿದ್ದ ಗೀತಾ ಎಂಬ 2 ತಿಂಗಳ ಹೆಣ್ಣು ಶಿಶುವನ್ನು ಮಕ್ಕಳ ಕಲ್ಯಾಣ ಸಮಿತಿಯು ತನ್ನ ವಶಕ್ಕೆ ಪಡೆದು ಮಾಗಡಿಯ ಸೋಲೂರಿನಲ್ಲಿರುವ ಸ್ನೇಹಾಲಯ ಶಿಶು ಮಂದಿರದಲ್ಲಿ  ತಾತ್ಕಾಲಿಕ ಪೋಷಣೆ ಮತ್ತು ರಕ್ಷಣೆಗಾಗಿ ಸೇರಿಸಿತ್ತು. ಈ ಮಗು ಈಗ 2 ಕೆ.ಜಿ. ತೂಕವಿರುತ್ತದೆ. ಕಂದು ಬಣ್ಣ, ಕೋಲು ಮುಖ ಹೊಂದಿದ್ದು, ದೈಹಿಕ ಮತ್ತು ಮಾನಸಿಕ ಸ್ಥಿತಿ ಉತ್ತಮವಾಗಿದೆ. ಈ ಮಗುವಿನ ಪೋಷಕರಿದ್ದಲ್ಲಿ ರಾಮನಗರದ ಸರ್ಕಾರಿ ಬಾಲಮಂದಿರದ ಅಧೀಕ್ಷಕರನ್ನು ಖುದ್ದಾಗಿ ಅಥವಾ ದೂ.080-27271067, ಮೊ. 9902597517 ಸಂಪರ್ಕಿಸಬಹುದು.
ಶಿಶು ಮಂದಿರದಲ್ಲಿ ತಾತ್ಕಾಲಿಕ ಪೋಷಣೆ
ರಾಮನಗರ: ಮಾಗಡಿಯ ಸೋಲೂರಿನಲ್ಲಿ ಸ್ನೇಹಾಲಯ ಆಸ್ಪತ್ರೆಯ ಮುಂಭಾಗದಲ್ಲಿರಿಸಿದ್ದ ಮಮತೆಯ ತೊಟ್ಟಿಲಿನಲ್ಲಿ ಆ.17ರಂದು 2 ದಿನದ ಹೆಣ್ಣು ಶಿಶುವನ್ನು ಇರಿಸಿ ಹೋಗಿದ್ದರು. ಈ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯು ತನ್ನ ವಶಕ್ಕೆ ಪಡೆದು, ವಿನುತಾ ಎಂದು ಹೆಸರಿಟ್ಟು, ಸ್ನೇಹಾಲಯ ಶಿಶು ಮಂದಿರದಲ್ಲಿ ತಾತ್ಕಾಲಿಕ ಪೋಷಣೆ ಮತ್ತು ರಕ್ಷಣೆ ನೀಡಿದೆ.  4 ತಿಂಗಳಾಗಿರುವ ಈ ಮಗು ಸದ್ಯ 4.5 ಕೆ.ಜಿ. ತೂಕವಿದ್ದು, ದೈಹಿಕ ಮತ್ತು ಮಾನಸಿಕವಾಗಿ ಉತ್ತಮ ಸ್ಥಿತಿಯಲ್ಲಿದೆ. ಈ ಮಗುವಿನ ಪೋಷಕರಿದ್ದಲ್ಲಿ ಸರ್ಕಾರಿ ಬಾಲಕಿಯರ ಬಾಲಮಂದಿರದ ಅಧೀಕ್ಷಕರನ್ನು ಸಂಪರ್ಕಿಸಬಹುದು.
ನೀರು ಕುಡಿದು 60 ಮಂದಿ ಅಸ್ವಸ್ಥ
ನೆಲಮಂಗಲ: ಕಾರ್ಖಾನೆಯೊಂದರಲ್ಲಿ ಕುಡಿಯುವ ನೀರು ಸೇವಿಸಿದ 60 ಮಂದಿ ನೌಕರರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶುಕ್ರವಾರ ಮಾದನಾಯಕನಹಳ್ಳಿಯಲ್ಲಿ ನಡೆದಿದೆ. ಮಾದನಾಯಕನಹಳ್ಳಿಯಲ್ಲಿರುವ ಮಂದನ ಗಾರ್ಮೆಂಟ್ಸ್ ನೌಕರರು ಪ್ರತಿ ನಿತ್ಯದಂತೆ ಮಧ್ಯಾಹ್ನ ಊಟ ಮುಗಿಸಿ ಕಾರ್ಖಾನೆಯಲ್ಲಿರುವ ಕುಡಿಯುವ ನೀರು ಸೇವಿಸಿದ ಪರಿಣಾಮ ಕೆಲ ಸಮಯದ ನಂತರ 60 ಮಂದಿ  ಅಸ್ವಸ್ಥಗೊಂಡದ್ದರಿಂದ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಕಾರ್ಖಾನೆಗೆ ಹೊರ ಗುತ್ತಿಗೆ ಆಧಾರದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜಾಗುತ್ತದೆ. ನೀರಿನಲ್ಲಿ ವ್ಯತ್ಯಾಸವಿದ್ದ ಪರಿಣಾಮ ಘಟನೆ ಸಂಭವಿಸಿದೆ. ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಜಗದೀಶ್‌ಕುಮಾರ್ ನೇಮಕ
ನೆಲಮಂಗಲ: ಅಂಬೇಡ್ಕರ್ ಯುವ ಸೇನೆಯ ತಾಲೂಕು  ಸಮಿತಿಯ ನೂತನ ಅಧ್ಯಕ್ಷರಾಗಿ ದೊಡ್ಡಬೆಲೆ  ಜಗದೀಶ್‌ಕುಮಾರ್ ಅವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement