ದೆಹಲಿಯ ಕವಿಗೋಷ್ಠಿ ದೊಡ್ಡಬಳ್ಳಾಪುರದ ಕವಿಗಳು
ದೊಡ್ಡಬಳ್ಳಾಪುರ: ದೆಹಲಿ ಕನ್ನಡ ಸಂಘ ಮತ್ತು ಮಂಗಳೂರಿನ ಹೃದಯವಾಹಿನಿ ನವದೆಹಲಿಯಲ್ಲಿ ನಡೆಸಿದ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ದೊಡ್ಡಬಳ್ಳಾಪುರ ಕವಿ ದಂಪತಿಗಳಾದ ಪ್ರಮೀಳಾ ಮಹದೇವ್ ಮತ್ತು ನ.ಮಹದೇವ್ ಭಾಗವಹಿಸಿದ್ದರು. ಸಮ್ಮೇಳನದಲ್ಲಿ ನಡೆದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಇಬ್ಬರೂ ಕವನಗಳನ್ನು ಪ್ರಸ್ತುತ ಪಡಿಸಿದರು. ಇದೇ ಸಂದರ್ಭದಲ್ಲಿ ಹೊರನಾಡ ಕನ್ನಡಿಗರ ಕುರಿತ ಹಲವು ಚಿಂತನ ಮಂಥನ ಕಾರ್ಯಕ್ರಮಗಳೂ ಏರ್ಪಾಟಾಗಿದ್ದವು. ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.