ವಿಎಸ್ಎಸ್ಎನ್ ಚುನಾವಣೆ: ನಾಮಪತ್ರಗಳು ನಾಪತ್ತೆ
ದೊಡ್ಡಬಳ್ಳಾಪುರ: ತಾಲೂಕಿನ ಕೊನಘಟ್ಟ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರ ಚುನಾವಣೆಗೆ ಸಲ್ಲಿಸಲಾಗಿದ್ದ 2 ನಾಮಪತ್ರಗಳು ನಾಪತ್ತೆಯಾಗಿರುವ ಪ್ರಕರಣ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾರಾಯಣಗೌಡ ಈ ಕುರಿತು ದೊಡ್ಡಬಳ್ಳಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶನಿವಾರ ಬೆಳಗ್ಗೆ ಕೊನಘಟ್ಟ ವಿಎಸ್ಎಸ್ಎನ್ ಅಧ್ಯಕ್ಷ ಸ್ಥಾನಕ್ಕೆ ನಾರಾಯಣಗೌಡ ಮತ್ತು ಮೂರ್ತಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಸಲ್ಲಿಕೆ ಸ್ವೀಕೃತಿ ಕೂಡ ಚುನಾವಣಾಧಿಕಾರಿಗಳಿಂದ ಪಡೆದಿದ್ದರು. ಆದರೆ ಪರಿಶೀಲನೆ ಸಂದರ್ಭದಲ್ಲಿ ನಾಮಪತ್ರಗಳು ಕಾಣೆಯಾಗಿದ್ದವು. ಈ ಅಚಾತುರ್ಯಕ್ಕೆ ಚುನಾವಣಾಧಿಕಾರಿಗಳೇ ಕಾರಣ ಎಂದು ಅವರು ದೂರಿನಲ್ಲಿ ಆರೋಪಿಸಿದ್ದು, ಸಂಘದ ಕಾರ್ಯದರ್ಶಿ ಮತ್ತು ಚುನಾವಣಾಧಿಕಾರಿಗಳ ವಿರುದ್ಧ ದೂರಿತ್ತಿದ್ದಾರೆ.