ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಶತಾಯುಷಿಗಳ ಅಪರೂಪದ ಸಮ್ಮಿಲನ

Rashmi Kasaragodu
Updated On : 29 Dec 2013, 1:45 am

ಆನೇಕಲ್ಲು: ಇದೊಂದು ಅಪರೂಪದಲ್ಲಿ ಅಪರೂಪದ ಸನ್ನಿವೇಶ. ನಡೆದಾಡುವ ದೇವರು ಸಿದ್ಧಲಿಂಗ ಮಠದ ಡಾ. ಶಿವಕುಮಾರಸ್ವಾಮಿಯವರು ಎಲ್ಲರಿಗೂ ಚಿರಪರಿಚಿತರು. ಚಂದಾಪುರದ ಸ್ವಾಮಿ ವಿವೇಕಾನಂದ ಗ್ರಾಮಾಂತರ ಶಿಕ್ಷಣ ಸಂಸ್ಥೆ ಭೂಮಿ ಪೂಜೆಗೆ 1963ರಲ್ಲಿ ಆಗಮಿಸಿ ಶಿಕ್ಷಣ ಸಂಸ್ಥೆ ಆಚಂದ್ರಾರ್ಕವಾಗಿ ಉಳಿಯಲಿ ಎಂದಿದ್ದರು. ಅವರ ಜೊತೆ ಭೂಮಿ ಪೂಜೆ ನೆರವೇರಿಸಿದ ಬಿಡ್ಡಾರೆಡ್ಡಿಯವರು ಭೂಮಿ, ಕಟ್ಟಡ ಹಾಗೂ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ಕೈ ಜೋಡಿಸಿದ್ದರು. ಸಮಾಜ ಸೇವೆಯಲ್ಲಿ ಎಲೆ ಮರೆ ಕಾಯಿಯಂತೆ ನಿರಂತರ ತೊಡಗಿಸಿಕೊಂಡ ಬಿಡ್ಡಾರೆಡ್ಡಿಯವರು ದೇಗುಲ ನಿರ್ಮಾಣ, ಬಡತನ ನಿವಾರಣೆಯಂತಹ ಸುಧಾರಣೆ ಕಾರ್ಯಕ್ರಮದಲ್ಲಿ ಗುರುತಿಸಿಕೊಂಡವರು. ವಿದ್ಯಾ ಸಂಸ್ಥೆಯ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಈ ಮಾತನ್ನು ವಿನಿಮಯ ಮಾಡಿಕೊಂಡು ತಿಳಿಸಿದರು. ಇದೇ ವೇದಿಕೆಯಲ್ಲಿ ಮತ್ತೋರ್ವ ಶತಾಯುಷಿ ಕೆ. ಮುನಿರೆಡ್ಡಿ (102) ಅವರು ಸ್ವಾಮಿಯವರ ದರ್ಶನ ಹಾಗೂ ಆಶೀರ್ವಾದ ಪಡೆದರು. ಸಮಾನ ಮನಸ್ಕರು ಹಾಗೂ ಸಮಾನ ವಯಸ್ಕರು ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಜನ ಮಾನಸಕ್ಕೆ ಸಂತಸವಾಯಿತು. ಅಪರೂಪದ ಸನ್ನಿವೇಶವನ್ನು ವೇದಿಕೆಯಲ್ಲಿ ಹಲವು ಬಾರಿ ಪ್ರಸ್ತಾಪಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement