ಮಕ್ಕಳಿಗೆ ಗುಣಮಟ್ಟದ ಶಿಕ್ಷಣ: ಲಕ್ಕೇಗೌಡ
ಮಾಗಡಿ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದು ಶಾಲಾ ಸಂಸ್ಥಾಪಕ, ಭಾರತ್ ಸಮೂಹ ಸಂಸ್ಥೆಗಳ ಸಂಸ್ಥಾಪಕ, ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಬಿ.ಎಲ್. ಲಕ್ಕೇಗೌಡ ನುಡಿದರು.
ಅವರು ಒಕ್ಕಲಿಗರ ಸಂಸ್ಥೆ ವತಿಯಿಂದ ನಡೆಯುತ್ತಿರುವ ಮಾನಸ ಪೂರ್ವ ಪ್ರಾಥಮಿಕ, ಶ್ರೀವಿದ್ಯಾನಿಧಿ ಪ್ರಾಥಮಿಕ ಹಾಗೂ ಮಾಗಡಿ ಕೆಂಪೇಗೌಡ ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಶೈಕ್ಷಣಿಕ ಸಮಿತಿ ಅಧ್ಯಕ್ಷ ಎಂ. ರೇವಣ್ಣ, ಸಂಘದ ಕಾರ್ಯದರ್ಶಿ ಡಿ.ಎಚ್.ಮಲ್ಲಿಕಾರ್ಜುನಯ್ಯ ಮಾತನಾಡಿದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಭಾರತ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಎಚ್. ರಂಗಪ್ಪ, ಪುರಸಭಾ ಸದಸ್ಯೆ ಹೊಂಬಮ್ಮ ನರಸಿಂಹಮೂರ್ತಿ, ತಗ್ಗೀಕುಪ್ಪೆ ರಾಮಕೃಷ್ಣಯ್ಯ, ನಿವೃತ್ತ ಪ್ರಾಂಶುಪಾಲ ಟಿ. ನಾರಾಯಣಪ್ಪ, ಬಿಇಓಎಸ್ ಕಾಲೇಜಿನ ಎಂಜಿನಿಯರ್ ನಾರಾಯಣ, ಕೆ.ಟಿ.ರಾಧಕೃಷ್ಣೇಗೌಡ, ಕುಮಾರಸ್ವಾಮಿ,ದೇವರಾಜೇಗೌಡ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ, ಸಿ.ಆರ್.ಪಿ. ಜಗದೀಶ್, ಪೋಷಕ ಬೋಧಕ ಸಮಿತಿ ಅಧ್ಯಕ್ಷ ಟಿ.ಎಂ. ಶ್ರೀನಿವಾಸ್, ಸದಸ್ಯ ಪುಟ್ಟಶಂಕರಪ್ಪ ಇತರರು ಇದ್ದರು.