ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸಂದರ್ಶನದ ಮೂಲಕ ನೇಮಕಾತಿ

Rashmi Kasaragodu
Updated On : 30 Dec 2013, 2:53 am

ಹಾಸನ: ಜಿಲ್ಲೆಯಲ್ಲಿ ಇರುವ ತಾಲೂಕುಗಳಲ್ಲಿ ಕೆಲಸ ನಿರ್ವಹಿಸಲು ಫೈನೋ ಪೇ ಟಿಕ್ ಲಿಮಿಟೆಡ್ ಅವರು ಸ್ವಸ್ಥ್ಯ ಭೀಮಾ ಯೋಜನೆ ಅಡಿಯಲ್ಲಿ ಕೆಲಸ ನಿರ್ವಹಿಸಲು ಅರ್ಹ ಆಸಕ್ತ ಪುರುಷ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ನೇಮಕ ಮಾಡಿಕೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಹಾಸನ ಅಥವಾ ದೂ.ಸಂಖ್ಯೆ 08172-268374  ಸಂಪರ್ಕಿಸಬಹುದು.

ಮನೆಗಳ್ಳನ ಬಂಧನ; ಕದ್ದ ಮಾಲು ವಶ




ಸಕಲೇಶಪುರ: ಮನೆ ಕಳ್ಳತನ  ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ತಾಲೂಕಿನ ಯಸಳೂರು ಪೊಲೀಸರು ಮಾಲು ಸಮೇತ ಬಂಧಿಸಿ ನ್ಯಾಯಲಯಕ್ಕೆ ಒಪ್ಪಿಸಿರುವ ಘಟನೆ ಶನಿವಾರ ನಡೆದಿದೆ. ತಾಲೂಕಿನ ಯಸಳೂರು ಹೋಬಳಿಯ ಹೊಸಕೋಟೆ ಗ್ರಾಮದ ಜಗಧೀಶ (22) ಎಂಬವನೇ ಕಳ್ಳತನ ಮಾಡಿ ಸಿಕ್ಕಿ ಬಿದ್ದಿರುವ ವ್ಯಕ್ತಿಯಾಗಿದ್ದಾನೆ. ಹೊಸೂರು ಹೊಸಕೋಟೆ ಗ್ರಾಮದ ಧರ್ಮಪ್ಪ ಅವರ ಮನೆಯಲ್ಲಿ ಇಟ್ಟಿದ್ದ 25 ಗ್ರಾಂ ತೂಕದ ಒಂದು ಮಾಂಗಲ್ಯ ಸರ ಹಾಗೂ ಎಚ್ಎಂಟಿ ಲೇಡಿಸ್ ಕೈ ಗಡಿಯಾರ ಕಳ್ಳತನವಾಗಿರುವ ಬಗ್ಗೆ ದೂರು ನೀಡಿದ್ದರು. ಪೊಲೀಸ್ ಅಧೀಕ್ಷಕ ಶ್ರೀ ರವಿ ಡಿ. ಚನ್ನಣ್ಣನವರ್ ಅವರ ಮಾರ್ಗದರ್ಶನದಲ್ಲಿ ಪೋಲಿಸ್ ವೃತ್ತ ನಿರೀಕ್ಷಕ ಗುರುರಾಜ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಎರಡು ದಿನದಲ್ಲಿ ಆರೋಪಿಯನ್ನು ಮಾಲು ಸಮೇತ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ನ್ಯಾಯಾಲಯವು ಆರೋಪಿಗೆ ಮುಂದಿನ ತಿಂಗಳು 11ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement