ಹಿರಿಯ ವಿದ್ಯಾರ್ಥಿಗಳ ಸಭೆ
ಕ.ಪ್ರ.ವಾರ್ತೆ ಕನಕಪುರ್ಣ ಡಿ.29
ಕನಕಪುರದ ದೇಗುಲಮಠದ ಶ್ರೀಮಹಾಲಿಂಗೇಶ್ವರ ಸಮುದಾಯ ಭವನದಲ್ಲಿ ಹಿರಿಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಸರ್ವಸದಸ್ಯರ ಮಹಾಸಭೆ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯಿತು. ಸಮಾರಂಭದ ನೇತೃತ್ವವನ್ನು ಶ್ರೀ ಮುಮ್ಮಡಿ ಮಹಾಲಿಂಗಸ್ವಾಮೀಜಿ ವಹಿಸಿದ್ದರು. ಶಾಸಕ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಸಚಿವ ವಿ.ಸೋಮಣ್ಣ 2014-ದಿನದರ್ಶಿಕೆ ಬಿಡುಗಡೆಯನ್ನು ನೆರವೇರಿಸಿದರು. ಸಭೆಯ ಮುಖ್ಯಅತಿಥಿಗಳಾಗಿ ವೀರತ್ತಯ್ಯ, ಮೃತ್ಯುಂಜಯಪ್ಪ, ಮಂಜುನಾಥ್, ವೀರಭದ್ರಯ್ಯ, ಗುರುಮಲ್ಲಯ್ಯ ಪಾಲ್ಗೊಂಡಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಬಾಲೇಗೌಡ ಸಭೆಯ ಕಲಾಪಗಳನ್ನು ನೆರವೇರಿಸಿದರು. ಉದ್ಯಮಿ ಕೀರ್ತಿಹಾಸನ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು.