ಚಿಕ್ಕನಹಳ್ಳಿ ಗೇಟ್ ಬಳಿ ಕನ್ನಡ ರಾಜ್ಯೋತ್ಸವ
ಸೂಲಿಬೆಲೆ: ಹೊಸಕೋಟೆ ತಾ.ನಂದಗುಡಿ ಹೋಳಿಯ ಚಿಕ್ಕನಹಳ್ಳಿ ಗೇಟ್ ಬಳಿ ಜೈ ಭುವನೇಶ್ವರಿ ಕನ್ನಡ ಯುವಕರ ಬಳಗದಿಂದ 58ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಎನ್.ನಾಗರಾಜ್ ಮಾತನಾಡಿ, ಕನ್ನಡ ರಾಜ್ಯೋತ್ಸವ ಸಮಾರಂಭಗಳು ಕೇವಲ ವೇದಿಕೆಗಳಿಗೆ ಸಿಮೀತವಾಗಬಾರದು. ಪ್ರತಿಯೊಬ್ಬ ಕನ್ನಡಿಗನ ತನು, ಮನದಲ್ಲಿ ಕನ್ನಡಭಾಷೆಯ ಪ್ರೀತಿ ಅಭಿಮಾನ ರೂಡಿಸಿಕೊಳ್ಳಬೇಕು. ಅನ್ಯ ಭಾಷಿಕರಿಗೆ ಕನ್ನಡವನ್ನು ಕಲಿಸುವ ಮುಖೇನ ನಾಡಿನಲ್ಲಿರುವ ಎಲ್ಲರು ಕನ್ನಡಿಗರನ್ನಾಗಿ ಪರಿರ್ವತನೆ ಹೊಂದುವಂತೆ ಮಾಡಬೇಕು ಎಂದರು. ರಾಜ್ಯೋತ್ಸವ ಅಂಗವಾಗಿ ಯುವಕರಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.