ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಗುಣಮಟ್ಟದ ರೇಷ್ಮೆಗೂಡಿನ ಉತ್ಪಾದನೆಯಿಂದ ಅಧಿಕ ಆದಾಯ

Rashmi Kasaragodu
Updated On : 1 Jan 2014, 1:01 am


ಮಾಗಡಿ: ರೇಷ್ಮೆ ಬೇಸಾಯದಲ್ಲಿ ತಾಂತ್ರಿಕತೆಯನ್ನು ಅಳವಡಿಸಿಕೊಂಡರೆ ಹಾಲಿನ ಉತ್ಪಾದನೆಯ ದರಕ್ಕಿಂತಲೂ ಗುಣಮಟ್ಟದ ರೇಷ್ಮೆಗೂಡಿನ ಉತ್ಪಾದನೆಯಲ್ಲಿ ಅಧಿಕ ಆದಾಯವನ್ನು ಪಡೆಯಬಹುದು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಎಂ.ಕೆ.ಧನಂಜಯ ತಿಳಿಸಿದರು.
ಅವರು ಮಾಗಡಿ ತಾಲೂಕಿ ತಿಪ್ಪಸಂದ್ರ ಪಂಚಾಯತಿ ವ್ಯಾಪ್ತಿಯ ರಘುವಿನಪಾಳ್ಯದಲ್ಲಿ ಏರ್ಪಡಿಸಿದ್ದ ರೇಷ್ಮೆ ಕ್ಷೇತ್ರೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ಅಧಿಕಾರಿಗಳು ರೈತರಿಗೆ ರೇಷ್ಮೆ ಬೆಳೆಯಲು ಹೆಚ್ಚೆಚ್ಚು ಪ್ರೋತ್ಸಾಹಿಸುವ ಮೂಲಕ ರೇಷ್ಮೆ ಬೆಳೆಗಾರರಿಗೆ ಸರ್ಕಾರದ ಸೌಲತ್ತುಗಳನ್ನು ಸಮರ್ಪಕವಾಗಿ ತಲುಪಿಸಬೇಕಿದೆ ಎಂದರು. ರೇಷ್ಮೆ ಇಲಾಖೆಯ ಉಪನಿರ್ದೇಶಕ ಮಸ್ತಾಫ್  ಆಲಿ ಮಾತನಾಡಿ, ರೇಷ್ಮೆ ಬೆಳೆಗಾರರಿಗೆ ಸರ್ಕಾರ ಸೌಲತ್ತುಗಳು ಹಾಗೂ ಯೋಜನೆಯ ಮಾಹಿತಿಯನ್ನು ನೀಡುತ್ತಿದೆ.
 ರೇಷ್ಮೆ ಬೆಳೆಗಾರರು ಯೋಜನೆಯ ಸೌಲತ್ತುಗಳನ್ನು ಪಡೆಯುವ ಮೂಲಕ  ಅಧಿಕ ಇಳುವರಿ ಪಡೆಯಬೇಕು. ಈ ನಿಟ್ಟಿನಲ್ಲಿ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.
 ರೈತರು ರೇಷ್ಮೆ ಬೇಸಾಯದಲ್ಲಿ  ಇಲಾಖೆ ನೀಡುವ ತಾಂತ್ರಿಕತೆ ಅಳವಡಿಸಿಕೊಂಡು, ಉತ್ತಮ ಗುಣಮಟ್ಟದ ರೇಷ್ಮೆ ಗೂಡನ್ನು ಬೆಳೆಯಬೇಕಿದೆ ಎಂದರಲ್ಲದೆ ಇಲಾಖೆಯಿಂದ ಸಿಗುವ ಸೌಲತ್ತುಗಳು ಹಾಗು ತಾಂತ್ರಿಕೆಯ ಮಹತ್ವದ ಮಾಹಿತಿಯನ್ನು  ಸಹಾಯಕ  ನಿರ್ದೇಶಕ ದೇವರಾಜೇಗೌಡ ತಿಳಿಸಿಕೊಟ್ಟರು. ವೃಷಬೇಂದ್ರಕುಮಾರ್, ಕೆಂಪಯ್ಯ, ಕಟ್ಟಿಮುನಿ, ಕೃಷ್ಣಪ್ಪ, ಪಟೇಲ್, ವೆಂಕಟೇಶ್ ಇತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement