ಮಾಗಡಿ ಕೆಂಪೇಗೌಡ ನಾಡು ಸಾಂಸ್ಕ ೃತಿಕ ಕಲಾ ಕ್ಷೇತ್ರವಾಗಲಿ
ಮಾಗಡಿ: ಮಾಗಡಿ ಕೆಂಪೇಗೌಡ ನಾಡು ಸಾಂಸ್ಕೃತಿಕ ಕಲಾ ಕ್ಷೇತ್ರವಾಗಲಿ ಎಂದು ಇಸ್ಕಾನ್ ನಿರ್ದೇಶಕ ತಿರುಚಿಸ್ವಾಮಿ ಆಶೀರ್ವದಿಸಿದರು.
ಅವರು ಐತಿಹಾಸಿಕ ಪ್ರಸಿದ್ಧ ಮಾಂಡವ್ಯ ಕ್ಷೇತ್ರದ ತಿರುಮಲೆ ಶ್ರೀರಂಗನಾಥಸ್ವಾಮಿ ದೇವಾಲಯದ ಮುಂಭಾಗ ಶ್ರೀರಂಗ ಸೇವಾ ಟ್ರಸ್ಟ್ ಭಾನುವಾರ ಏರ್ಪಡಿಸಿದ್ದ ಸದ್ಗುರು ತ್ಯಾಗರಾಜ ಮತ್ತು ಸಂತ ಪುರಂದರರ ಆರಾಧನಾ ಮಹೋತ್ಸವದ ಸಮಾರಂಭದಲ್ಲಿ ಮಾತನಾಡಿದರು. ಇಬ್ಬರು ಮಹಾಮಹಿಮರ ಆರಾಧನೆಗೆ ಈ ಭೂಮಿ ಅರ್ಹತೆ ಪಡೆದಿದೆ. ತ್ಯಾಗರಾಜ, ಪುರಂದರರು ಪೆನ್ನು ಹಿಡಿದು ಕೃತಿ ರಚಿಸಲಿಲ್ಲ, ಅಂತರಂಗದಿಂದಲೇ ಕೃತಿ ರಚಿಸಿದವರು ಎಂದರು
ಮೈಸೂರಿನ ಸಂಗೀತ ಉಪಾಸಕರಾದ ಕೆ.ಎನ್.ರಾಜಾಮಣಿ ಮಾತನಾಡಿದರು. ಇದೇ ವೇಳೆ ಬೆಂಗಳೂರಿನ ಆರ್.ಮಂಜುನಾಥ್ ಸಂಗಡಿಗರು ಸಾಕ್ಸೋ ಪೋನ್ ವಾದನ ನುಡಿಸಿದರು.
ಇಂದುಮತಿ ಸಂಗಡಿಗರು ಪಂಚರತ್ನ ಕೃತಿಗಳ ಸಮೂಹ ಗಾಯನ ನಡೆಸಿಕೊಟ್ಟರು. ಮೈಸೂರಿನ ಸಚಿನ್ ಸಂಗಡಿಗರು ತ್ಯಾಗರಾಜ ಮತ್ತು ಪರಂದರರ ದೇವರ ನಾಮ ಗಾಯನ, ದಿವಾಕರ್ ಕಶ್ಯಪ್ ಸಂಗಡಿಗರು ಮತ್ತು ಅನಂತಭಾಗವತರು ಪುರಂದರರ ದೇವರ ನಾಮ ಹಾಡಿದರು.
ಶ್ರೀರಂಗಸೇವಾ ಟ್ರಸ್ಟ್ ಅಧ್ಯಕ್ಷ ಟಿ.ಎಸ್. ಸತೀಶ್, ಸುರೇಶ್, ಜಗನ್ನಾಥ್, ಶ್ರೀರಂಗ, ಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಟಿ.ಸಿ. ನಾರಾಯಣಸ್ವಾಮಿ, ವೆಂಕಟೇಶ್ ಅಯ್ಯಂಗಾರ್, ಟಿ.ಎಸ್. ಪ್ರಭು, ಕೆ.ಎಸ್. ಹರೀಶ್, ಸುಧೀಂದ್ರ, ಎಸ್.ಸುನೀಲ್, ಚಂದ್ರಶೇಖರ್, ಹಿರಿಯ ಅರ್ಚಕ ಗೋವಿಂದರಾಜು, ಗೋಪಾಲ್, ಶಾಂತಿ ಹರೀಶ್ ಇತರರು ಹಾಜರಿದ್ದರು.