ಮುಳ್ಳಹಳ್ಳಿಯಲ್ಲಿ ನೂರಾರು ಮಂದಿ ಜೆಡಿಎಸ್‌ಗೆ ಸೇರ್ಪಡೆ
ಕನಕಪುರ: ತಾಲೂಕು ಮುಳ್ಳಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮ ರಾಜ್ಯಕಾರ್ಯಾಧ್ಯಕ್ಷ, ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ನೇತೃತ್ವದಲ್ಲಿ ನಡೆಯಿತು.
ಮುಖಂಡ ದೊಡ್ಡಕೊಪ್ಪ ಎಲ್.ರಾಜು ನೇತೃತ್ವದಲ್ಲಿ ನೂರಾರು ಮಂದಿ ಯುವಕರು ಜಾತ್ಯತೀತ ಜನತಾದಳಕ್ಕೆ ಸೇರ್ಪಡೆಗೊಂಡರು.
ಮಾಜಿ ಸಚಿವ ಸಿಂಧ್ಯಾ ಮಾತನಾಡಿ, ಲೋಕಸಭಾ ಚುನಾವಣೆಗಳಲ್ಲಿ ಸಾತನೂರು ಕ್ಷೇತ್ರ ಜೆಡಿಎಸ್‌ಗೆ ಬಹುಮತ ನೀಡಿರುವುದು ಪಕ್ಷದ ಬೇರುಗಳು ಗಟ್ಟಿಯಾಗಿರುವುದನ್ನು ತೋರುತ್ತದೆ. ಪೋಷಣೆಯಿಲ್ಲದೆ ಸೊರಗಿರುವ ಪಕ್ಷವನ್ನು ಬೇರುಮಟ್ಟದಿಂದ ಸದೃಢಗೊಳಿಸಿ, ಸಂಘಟಿಸಿ ಜನತಾದಳವನ್ನು ಅಧಿಕಾರಕ್ಕೆ ತರಲು ಎಲ್.ರಾಜು ನೇತೃತ್ವದ ಯುವಸಮೂಹ ಒಗ್ಗಟ್ಟಾಗಿದೆ. ಅವರ ಸೇರ್ಪಡೆಯಿಂದಾಗಿ ಪಕ್ಷಕ್ಕೆ ಭೀಮಬಲ ಬಂದಂತಾಗಿದೆ ಎಂದರು.
ಕೋಡಿಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಬಿ.ಗಣೇಶ್, ನಂದೀಶ್, ಬಾಲನರಸಿಂಹ, ಮಾರೇಗೌಡ, ಮಹೇಶ್, ಬಿ.ನಾಗರಾಜು, ಕೆ.ಆರ್.ಕೃಷ್ಣಮೂರ್ತಿ, ಜಯರಾಂ, ಮುಜೀಬುಲ್ಲಾ, ಸಬ್ದರ್, ಸ್ಟುಡಿಯೋ ಚಂದ್ರು, ಗಬ್ಬಾಡಿ ರವಿ, ವಿಶ್ವಮೂರ್ತಿ, ಮೊದಲಾದವರು ಪಾಲ್ಗೊಂಡಿದ್ದರು.