ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಆತ್ಮಹತ್ಯೆ ಮಾಡಿಕೊಂಡ ಇಬ್ಬರು ವಿದ್ಯಾರ್ಥಿಗಳ ಅಂತ್ಯಕ್ರಿಯೆ

Mainashree
Updated On : 5 Feb 2013, 12:05 pm

ರಾಮನಗರ: ಉಡುಪಿ ಜಿಲ್ಲೆಯ ಮಲ್ಪೆ ಬೀಚ್ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಇಬ್ಬರು ವಿದ್ಯಾರ್ಥಿಗಳ ಅಂತ್ಯಕ್ರಿಯೆ ಸೋಮವಾರ ಸ್ವಗ್ರಾಮಗಳಲ್ಲಿ ನಡೆಯಿತು.  ಭಾನುವಾರ ಸಾವ್ನಪ್ಪಿದ್ದ ಹೇಮಂತ್ ಮತ್ತು ಮಧು ಅವರ ಶವಗಳ ಪರೀಕ್ಷೆಯನ್ನು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ನಡೆಸಿ, ಶವಗಳನ್ನು ವಾರಸುದಾರರ ವಶಕ್ಕೆ ಒಪ್ಪಿಸಲಾಗಿತ್ತು. ಕುಟುಂಬದವರು ಸೋಮವಾರ ಬೆಳಗ್ಗೆ ಶವಗಳನ್ನು ಸ್ವಗ್ರಾಮಕ್ಕೆ ತಂದರು.  ಹೇಮಂತ್ ಶವದ ಅಂತ್ಯಕ್ರಿಯೆಯನ್ನು ಹುಟ್ಟೂರು ಕಣ್ವದಲ್ಲಿ, ಮಧು ಶವ ಸಂಸ್ಕಾರವನ್ನು ತಿಮ್ಮಯ್ಯನದೊಡ್ಡಿಯಲ್ಲಿ ನಡೆಸಲಾಯಿತು. ಮೃತರ ಕುಟುಂಬದವರ ರೋದನ ಮುಗಿಲು ಮುಟ್ಟಿತ್ತು. ಬಂಧುಗಳು,  ಗ್ರಾಮಸ್ಥರು ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಜ.22ರಂದು ಹೇಮಂತ್, ಮಧು ಮತ್ತೊಬ್ಬ ವಿದ್ಯಾರ್ಥಿನಿ ಸೌಮ್ಯ ಜತೆ ಕಾಣೆಯಾಗಿದ್ದರು. ಮೂವರು ವಿಷ ಬೆರೆಸಿಕೊಂಡು ಬಿರಿಯಾನಿ ಸೇವಿಸಿದ್ದರು. ಮಧು ಬೀಚ್ನಲ್ಲೇ ಕೊನೆಯುಸಿರೆಳೆದಿದ್ದನು. ತೀವ್ರ ಅಸ್ವಸ್ಥಗೊಂಡಿದ್ದ ಹೇಮಂತ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದು. ಸೌಮ್ಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement