ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಕಲೆ, ಸಾಹಿತ್ಯ, ಸಂಸ್ಕೃತಿ ಅರಿವು ಅಗತ್ಯ'

Mainashree
Updated On : 5 Feb 2013, 12:04 pm

ನೆಲಮಂಗಲ: ಆಧುನಿಕತೆಗೆ ಮಾರು ಹೋಗುತ್ತಿರುವ ಯುವ ಜನತೆಗೆ ಕಲೆ, ಸಾಹಿತ್ಯ, ಸಂಸ್ಕೃತಿ ಮಹತ್ವದ ಅರಿವು ಮೂಡಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಬೆಂಗಳೂರು (ಗ್ರಾ) ಜಿಲ್ಲಾ ಕಸಾಪ ಅಧ್ಯಕ್ಷ ಹುಲಿಕಲ್ ನಟರಾಜು ಕಿವಿಮಾತು ಹೇಳಿದ್ದಾರೆ.  ಸೋಮವಾರ ಪಟ್ಟಣದ ದಿವ್ಯಜ್ಯೋತಿ ಕಲಾ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ವಿಚಾರ ಸಂಕಿರಣ ಮತ್ತು ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.  ಗ್ರಾಮೀಣ ಪ್ರದೇಶದ ಯುವಕರಲ್ಲಿ ಸುಪ್ತವಾಗಿ ಇರುವ ಕಲೆ ಗುರ್ತಿಸುವ ಕಾರ್ಯವನ್ನು ಸಂಘ ಸಂಸ್ಥೆಗಳು ಮಾಡುತ್ತಿವೆ. ಇದರ ಸದುಪಯೋಗ ಪಡಿಸಿಕೊಳ್ಳಲು ಯುವಕರು ಮುಂದಾಗಬೇಕು. ಕಲೆ ಮತ್ತು ಸಂಸ್ಕೃತಿಗೆ ರಾಜ್ಯ ಹಿಂದಿನಿಂದಲೂ ಪ್ರಖ್ಯಾತಿ ಪಡೆದಿದ್ದು, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಉತ್ತಮ ಕಲಾ ಪ್ರದರ್ಶನ ಮಾಡಿದ ಕಲಾವಿದರನ್ನು ನಾವು ಇಲ್ಲಿ ಕಾಣಬಹುದು ಮುಂದೆಯೂ ಯುವ ಶಕ್ತಿ ರಾಜ್ಯದಲ್ಲಿನ ಕಲಾ ಶ್ರೀಮಂತಿಕೆ ಉಳಿಸಿ ಬೆಳೆಸುವುದರ ಜೊತೆಗೆ, ಮಾತೃಭಾಷೆ  ಶ್ರೀಮಂತಗೊಳಿಸಲು ಎಲ್ಲರೂ ಶ್ರಮಿಸಬೇಕು ಎಂದು ತಿಳಿಸಿದರು.  ಕೆಪಿಸಿಸಿ ಸದಸ್ಯ ಸೈಯದ್ ಖಲೀಂ ಮುಲ್ಲಾ ಮಾತನಾಡಿ, ಪೋಷಕರು ತಮ್ಮ  ಮಕ್ಕಳಿಗೆ ಉತ್ತಮ ಸಂಸ್ಕಾರ ಮೂಲರ ಒಳ್ಳೆಯ ವಿಚಾರಧಾರೆ ಅಳವಡಿಸಿಕೊಳ್ಳಬೇಕು ಎಂದರು. ರಾಷ್ಟ್ರ ಪ್ರಶಸ್ತಿ ವಿಜೇತ ಡಾ.ಲಕ್ಷ್ಮಣದಾಸ್ ಅಧ್ಯಕ್ಷತೆ ವಹಿಸಿದ್ದರು. ಕವಿಗೋಷ್ಠಿಯಲ್ಲಿ ಹೆಚ್.ಡಿ.ಪರಮಶಿವಯ್ಯ, ಚಂದ್ರಯ್ಯ, ರೇಣುಕಮ್ಮ, ಅಪ್ಪಾಸಾಹೇಬ ಗಾಣಿಗೇರ್, ಗೋಪಾಲ ವಸಂತ ಸಣ್ಣಕ್ಕಿ, ಸೌಜನ್ಯ, ವೆಂಕಟೇಶ ಕುಲಕರ್ಣಿ ಕಾವ್ಯ ವಾಚನ ಮಾಡಿದರು. ದಿವ್ಯಜ್ಯೋತಿ ಕಲಾಕೇಂದ್ರದ ಅಧ್ಯಕ್ಷ ಎಲ್.ಕೃಷ್ಣಮೂರ್ತಿ, ತಾಲೂಕು ಕಸಾಪ ಅಧ್ಯಕ್ಷ ಎನ್.ರಾಜಶೇಖರ್, ಸಾಹಿತಿ ಮತ್ತು ಮಹಿಳಾ ಚಿಂತಕರು ಬಿ.ಸಿ.ಶೈಲಾ ನಾಗರಾಜ್, ಕಾರ್ಯಕ್ರಮದ ನಿರ್ದೇಶಕ ವೆಂಕಟೇಶ್ ಚೌಥಾಯಿ ಸೇರಿದಂತಕಾಲೇಜು ಉಪನ್ಯಾಸಕರು ಹಾಗೂ ಶಿಕ್ಷಕರು ಇದ್ದರು.
ಹೇಮಂತ್ಗೆ ಸನ್ಮಾನ
ನೆಲಮಂಗಲ: ಬಿಜಾಪುರದಲ್ಲಿ ಫೆಬ್ರವರಿ 9,10,11ರಂದು ನಡೆಯುವ 79ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಟ್ಟಣದ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಎನ್.ಪಿ. ಹೇಮಂತ್ಕುಮಾರ್ ಸನ್ಮಾನಿತರಾಗಿ ಆಯ್ಕೆಗೊಂಡಿರುವಹಿನ್ನೆಲೆಯಲ್ಲಿ  ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಸಾಪ ಜಿಲ್ಲಾ ಅಧ್ಯಕ್ಷ ಹುಲಿಕಲ್ ನಟರಾಜು, ತಾಲೂಕು ಅಧ್ಯಕ್ಷ ಎನ್.ರಾಜಶೇಖರ್, ಜಿಲ್ಲಾ ಕಾರ್ಯದರ್ಶಿ ಕೆ.ಬಿ. ಸದಾನಂದ ಆರಾಧ್ಯಮಹಲಿಂಗಪ್ಪ, ಜಿಲ್ಲಾ ಕೋಶಾಧ್ಯಕ್ಷ ಮಹದೇವ್, ಪದಾಧಿಕಾರಿಗಳಾದ ನಾಗೇಶ್, ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ನೂತನ ತಹಸೀಲ್ದಾರ್ ಡಾ. ಬಿ.ಆರ್. ಹರೀಶ್ ನಾಯಕ್ ಅಧಿಕಾರ ಸ್ವೀಕಾರ

ಮಾಗಡಿ: ಇಲಾಖೆ ಸಿಬ್ಬಂದಿಗಳು ರೈತರನ್ನು ಸುಮ್ಮನೆ ಅಲೆಸದೆ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವಂತೆ    ನೂತನ ತಹಸೀಲ್ದಾರ್ ಡಾ. ಬಿ.ಆರ್. ಹರೀಶ್ ನಾಯಕ್ ತಿಳಿಸಿದರು.    ಅವರು ತಾಲೂಕು ಕಚೇರಿಯಲ್ಲಿ  ಅಧಿಕಾರ ಸ್ವೀಕರಿಸಿ ಸಿಬ್ಬಂದಿಗಳ ಪ್ರಥಮ ಸಭೆ ಕರೆದು ಮಾತನಾಡುತ್ತಾ ತಾಲೂಕು ಕಚೇರಿಗೆ ಬರುವ ರೈತರನ್ನು ಸೌಜನ್ಯದಿಂದ ಕಾಣಬೇಕು. ಸಾರ್ವಜನಿಕರನ್ನು ಅಲೆಸಬಾರದು, ಅವರಿಗೆ ಸೂಕ್ತ ಮಾಹಿತಿ ನೀಡಿ, ಆದಷ್ಟು ಬೇಗ ಕೆಲಸ ಮಾಡಿಕೊಡುವುದನ್ನು ರೂಢಿಸಿಕೊಳ್ಳುವಂತೆ ಕರೆ ನೀಡಿದರು.    ಇದೇ ಸಂದರ್ಭದಲ್ಲಿ ಶೀರಸ್ತೇದಾರ್ ಕರಿಲಿಂಗಯ್ಯ, ರೆವಿನ್ಯೂ ಅಧಿಕಾರಿಗಳಾದ ಗುರುಲಿಂಗಯ್ಯ, ಮಹದೇವಯ್ಯ, ವಿಜಯಕುಮಾರ್, ಮಹಾಲಿಂಗಯ್ಯ ಸೇರಿದಂತೆ ಇಲಾಖೆ ಸಿಬ್ಬಂದಿಗಳು ನೂತನ ತಹಸೀಲ್ದಾರ್ ಹರೀಶ್ ನಾಯಕ್  ಅವರಿಗೆ ಹಾರ ಹಾಕಿ ಸ್ವಾಗತಿಸಿದರು.   ಆಹಾರ ಇಲಾಖೆ, ಸರ್ವೆ ಇಲಾಖೆ, ತಾಲೂಕು ಕಚೇರಿ ಸಿಬ್ಬಂದಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement