ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ: ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ

Rashmi Kasaragodu
Updated On : 6 Feb 2013, 12:11 pm





ದೇವನಹಳ್ಳಿ: ದೇವನಹಳ್ಳಿ ತಾಲೂಕು ಆವತಿ ಸಮೀಪವಿರುವ ಬುಳ್ಳಹಳ್ಳಿ ಗ್ರಾಮದಲ್ಲಿರುವ ಹಿಂದೂ ದೇವರ ವಿಗ್ರಹಗಳನ್ನು ಭಾನುವಾರ ರಾತ್ರಿ ಕಿಡಿಗೇಡಿಗಳು ಭಿನ್ನಗೊಳಿಸಿರುವ ಹಿನ್ನೆಲೆಯಲ್ಲಿ ದೇವನಹಳ್ಳಿ ತಾಲೂಕು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಇಲ್ಲಿನ ಪ್ರವಾಸಿ ಮಂದಿರದಿಂದ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ಮತ್ತು ಬಹಿರಂಗ ಸಭೆ ನಡೆಸಿದರು.
ನಂತರ ತಹಸೀಲ್ದಾರ್ ವೆಂಕಟರಾಜು ಅವರಿಗೆ ಮನವಿ ನೀಡಿ ಮೂರು ದಿನದೊಳಗಾಗಿ ದುಷ್ಕರ್ಮಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
ಬುಳ್ಳಹಳ್ಳಿ ಗ್ರಾಮದ ಮೂರು ಅಶ್ವತ್ಥಕಟ್ಟೆಗಳಲ್ಲಿನ ನಾಗರ ಕಲ್ಲುಗಳು, ಎರಡು ಆಂಜನೇಯ ಸ್ವಾಮಿ ದೇವಾಲಯಗಳಲ್ಲಿನ ವಿಗ್ರಹ, ಗಂಗಮ್ಮದೇವಿ ವಿಗ್ರಹ ಅಲ್ಲದೆ ನವಗ್ರಹ ದೇವರ ಮೂರ್ತಿ ಭಿನ್ನ ಮಾಡಿರುವ ಬಗ್ಗೆ ವಿಶ್ವ ಹಿಂದೂ ಪರಿಷತ್ತಿನ ಮುಖಂಡರಾದ ಎ.ಸಿ.ಗುರುಸ್ವಾಮಿ, ದೇ.ಸೂ.ನಾಗರಾಜು, ಡಿ.ಆರ್.ನಾರಾಯಣಸ್ವಾಮಿ ಹಾಗೂ ಬುಳ್ಳಹಳ್ಳಿ ಗ್ರಾಮದ ಮುಖಂಡರಾದ ರಾಜಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಎಲ್ಲ ಜನಾಂಗದವರು ಸಹೋದರರಂತೆ ಬಾಳುತ್ತಿರುವಾಗ ಯಾರೋ ಕಿಡಿಗೇಡಿಗಳು ಗ್ರಾಮದಲ್ಲಿ ಶಾಂತಿಗೆ ಭಂಗ ತರುವಂತಹ ಕೆಲಸಮಾಡಿದ್ದು ಈ ಕೃತ್ಯದಲ್ಲಿ ಎಂತಹ ಪ್ರಭಾವಿ ವ್ಯಕ್ತಿಗಳೇ ಆಗಿರಲಿ ಅಲ್ಲದೆ ಪ್ರೇರೇಪಣೆ ನೀಡಿರುವವರು ಸಹ ಯಾರೇ ಆಗಲಿ ಅಂತಹವರನ್ನು ಪೊಲೀಸರು ಬಂಧಿಸಿ ಕಾನೂನಿನ ಕ್ರಮ ಕೈಗೊಂಡು ರಾಜ್ಯದಿಂದಲೇ ಗಡಿಪಾರು ಮಾಡಬೇಕೆಂದು ತಿಳಿಸಿದರು.
ತಹಸೀಲ್ದಾರ್ ವೆಂಕಟರಾಜು ಅವರು ಮನವಿ ಸ್ವೀಕರಿಸಿ ತಾವು ಬುಳ್ಳಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಇದು ಹೇಯ ಕೃತ್ಯವಾಗಿದೆ. ಇದನ್ನು ಖಂಡಿಸಲೇ ಬೇಕಾಗಿದೆ ಎಂದರಲ್ಲದೆ  ಸೂಕ್ರ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.
ವಿಹಿಂಪ ಮುಖಂಡರಾದ ಮಧುಸೂಧನ್, ಎಸ್.ರಮೇಶ್, ಜಿ. ರಂಗಸ್ವಾಮಿ, ಎನ್.ಸುರೇಶ್ ಆಚಾರ್ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement