ಗೌಡಗೆರೆ ಗ್ರಾಮದಲ್ಲಿ ಕಾನೂನು- ಅರಿವು ನೆರವು ಕಾರ್ಯಕ್ರಮ
ಗೌರಿಬಿದನೂರು: ತಾಲೂಕು ಮಂಚೆನಹಳ್ಳಿ ಹೋಬಳಿಯ ವ್ಯಾಪ್ತಿಯ ಗೌಡಗೆರೆ ಗ್ರಾಮದಲ್ಲಿ ಜಿಲ್ಲಾ ಕಾನೂನು ಪ್ರಾಧಿಕಾರ ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಿವಿಧ ಇಲಾಖೆಗಳ ಸಹಯೋಗದೋಂದಿಗೆ ಕಾನೂನು- ಅರಿವು ನೆರವು ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಎ.ಎಂ. ನಳಿನಿ ಕುಮಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಕಾನೂನುಗಳ ಬಗ್ಗೆ ಅರಿತುಕೊಳ್ಳಿ. ದೇಶದಲ್ಲಿ ಅತಿ ಹೆಚ್ಚು ಮಹಿಳೆಯರು ಒಂದಲ್ಲಾ ಒಂದು ಕಾರಣದಿಂದ ಸಮಾಜದಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಳೆ. ತನ್ನ ಹಕ್ಕು ಅರಿಯಲಾಗದೆ ಅನ್ಯಾಯವಾದಾಗ ನ್ಯಾಯ ಕೇಳಬೇಕಾದರೆ ಕಾನೂನು ತಿಳಿದಿರಬೇಕು ಎಂದರು.
ತಹಸೀಲ್ದಾರ್ ನಾಗರಾಜ್ ಶೆಟ್ಟಿ ಮಾತನಾಡಿದರು. ತಾಲೂಕು ರೈತ ಸಂಘ ಅಧ್ಯಕ್ಷ ಎಂ. ಆರ್. ಲಕ್ಷ್ಮಿನಾರಾಯಣ್, ಹೆಚ್ಚುವರಿ ನ್ಯಾಯಾಧೀಶೆ ವಿ.ನಾಗಮಣಿ, ಗ್ರಾಪಂ ಅಧ್ಯಕ್ಷೆ ವರಲಕ್ಷ್ಮಿಎನ್. ಪ್ರಕಾಶ್, ಹಿರಿಯ ವಕೀಲರಾದ ಎಸ್.ಎಸ್. ಸೀತಾರಾಮ್‌ರೆಡ್ಡಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ರಾಮ ಚಂದ್ರ ರೆಡ್ಡಿ, ಇತರರು ಇದ್ದರು.