ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸಾಕ್ಷ್ಯ ಹೇಳಲು ಅಂಜಿ ಆತ್ಮಹತ್ಯೆ

Mainashree
Updated On : 8 Feb 2013, 12:37 pm

ಚನ್ನಪಟ್ಟಣ: ಗೆಳತಿಯ ಪ್ರೇಮದ ಬಗ್ಗೆ ಪಂಚಾಯಿತಿ ಕಟ್ಟೆಯಲ್ಲಿ ಸಾಕ್ಷ್ಯ ಹೇಳಬೇಕಾಗುತ್ತದೆ ಎಂದು ಹೆದರಿ ಯುವತಿಯೊಬ್ಬಳು ಸೀಮೆಎಣ್ಣೆ ಸುರಿದು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ತಾಲೂಕಿನ ಹಾರೋಕೊಪ್ಪ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಾನಸ (20) ಮೃತಪಟ್ಟವಳು. ಆತ್ಮಹತ್ಯೆಗೆ ಯತ್ನಿಸಿದ ಈಕೆಯನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಆದರೂ ಬದುಕುಳಿಯಲಿಲ್ಲ.
ಘಟನೆಯ ವಿವರ:  ತಮ್ಮ ಊರಿನ ರೋಜ ಮಾತ್ತು ಧನಂಜಯ ಎಂಬವರ ನಡುವಿನ ಪ್ರೇಮ ಪ್ರಕರಣ ವಿಕೋಪಕ್ಕೆ ತಿರುಗಿ ಪಂಚಾಯಿತಿ ಕಟ್ಟೆಗೇರಿತ್ತು. ನಾನು ರೋಜಾಳನ್ನು ಪ್ರೀತಿಸುತಿದ್ದು ನಿಜ ಎಂಬುದು ಧನಂಜಯನ ವಾದವಾದರೆ, ನಮ್ಮ ಹುಡುಗಿ ಪ್ರೀತಿಯನ್ನೇ ಮಾಡಿಲ್ಲ ಎಂಬುದು ಯುವತಿ ಕಡೆಯವರ ವಾದವಾತ್ತು.
ಇಬ್ಬರ ನಡುವಿನ ವಾದ- ವಿವಾದ ತಾರಕ್ಕೇರಿದಾಗ ಧನಂಜಯ ನಮ್ಮಿಬ್ಬರ ನಡುವಿನ ಪ್ರೇಮಕ್ಕೆ ಮಾನಸ ಸಾಕ್ಷಿಯಾಗಿದ್ದಾಳೆ. ಅವಳನ್ನು ಕರೆಸಿ ಕೇಳಿ ಎಂದಿದ್ದಾನೆ. ನನ್ನನ್ನು ಪಂಚಾಯಿತಿ ಕಟ್ಟೆಗೆ ಕರೆದು ಸಾಕ್ಷ್ಯ ಕೇಳುತ್ತಾರೆಂದು ಅಂಜಿದ ಮಾನಸ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಸಂಬಂಧ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಮೂರು ಮಂದಿ ವಿರುದ್ಧ ದೂರು ದಾಖಲಾಗಿದೆ. ಈ ಪೈಕಿ ಶಿವಕುಮಾರ್ ಎಂಬುವನನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement