'ಕಾವೇರಿ ಐತೀರ್ಪು ಪ್ರಕಟಿಸಿದರೆ ಉಗ್ರ ಹೋರಾಟ'
ಚನ್ನಪಟ್ಟಣ: ರಾಜ್ಯವನ್ನು ಪ್ರತಿನಿಧಿಸಿರುವ ಕೇಂದ್ರ ಸಚಿವರು ಅಧಿಕಾರ ಲಾಲಸೆಯಿಂದ ನಾಡಿನ ಹಿತಕಡೆಗಣಿಸಿದ್ದಾರೆ. ಇದರಿಂದಾಗಿ ಕಾವೇರಿ ಐತೀರ್ಪಿನ ಅಧಿಸೂಚನೆ ಹೊರ ಬೀಳುವಂತಾಗಿದೆ ಎಂದು ಜನಪರ ವೇದಿಕೆ ಅಧ್ಯಕ್ಷ ರಮೇಶ್ಗೌಡ ಆಕ್ರೋಶ ವ್ಯಕ್ತಪಡಿಸಿದರು. ವೇದಿಕೆ ಕಾವೇರಿ ಐತೀರ್ಪಿನ ವಿರುದ್ಧ ಹಮ್ಮಿಕೊಂಡಿದ್ದ ಜನಾಂದೋಲನ ಉದ್ದೇಶಿಸಿ ಮಾತನಾಡಿದ ಅವರು, ತಮಿಳುನಾಡಿನ ಬಾಲಬಡುಕತನಕ್ಕೆ ಕೇಂದ್ರ ಮರುಳಾಗಿದೆ. ನಮ್ಮ ರಾಜ್ಯದ ಕೇಂದ್ರ ಮಂತ್ರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಆರೋಪಿಸಿದರು. ಜನಾಂದೋಲನದಲ್ಲಿ ಅಧ್ಯಕ್ಷೆ ಮಂಗಳಮ್ಮ, ಉಪಾಧ್ಯಕ್ಷ ಸಿ.ಕೆ.ಎಂ. ಗೌಡ, ಯುವ ಘಟಕದ ಅಧ್ಯಕ್ಷ ನಿಲೇಶ್ ಗೌಡ, ಸಂಘಟನಾ ಕಾರ್ಯದರ್ಶಿ ದಿನೇಶ್, ಮಲ್ಲೇಶ್, ವಳಗೆರೆ ದೊಡ್ಡಿ ಶಂಕರ್, ಲಕ್ಷ್ಮಮ್ಮ ಮುಂತಾದವರು ಪಾಲ್ಗೊಂಡಿದ್ದರು.