ಪ.ಜಾತಿ-ವರ್ಗದ ಕುಂದುಕೊರತೆ ವಿಚಾರಣೆ ಸಭೆ
ದೊಡ್ಡಬಳ್ಳಾಪುರ: ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ವರ್ಗಗಳ ಕುಂದುಕೊರತೆಗಳ ವಿಚಾರಣೆ ಸಭೆ ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ತಹಶೀಲ್ದಾರ್ ಚಂದ್ರ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಮತ್ತು ಎಲ್ಲ ಇಲಾಖೆಗಳು ಹಾಗೂ ಸಂಬಂಧಿತ ಸಮಿತಿಗಳಿಂದ ನೀಡಬೇಕಾದ ಎಲ್ಲ ಬಗೆಯ ಸವಲತ್ತು ಮತ್ತು ಇತರ ಅನುಕೂಲತೆಗಳನ್ನು ನೀಡಲು ಅಧಿಕಾರಿಗಳಿಗೆ ತಿಳಿವಳಿಕೆ ನೀಡಲಾಯಿತು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷ ಡಿ. ನಾಗರಾಜ್, ನಗರಸಭೆ ಅಧ್ಯಕ್ಷ ಜಗದೀಶರೆಡ್ಡಿ, ತಾ.ಪಂ ಸದಸ್ಯ ಮುನಿಬೈರಪ್ಪ ಸೇರಿದಂತೆ ಕೆಲ ಸದಸ್ಯರು, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಸಿ.ಎನ್. ಅಶ್ವತ್ಥನಾರಾಯಣರೆಡ್ಡಿ ಮತ್ತಿತರರು ಭಾಗವಹಿಸಿದ್ದರು.