'ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳ ಬೀಜ ಬಿತ್ತಿ'
ದೇವನಹಳ್ಳಿ: ಇಲ್ಲಿನ ನಗರೇಶ್ವರಕಲ್ಯಾಣ ಮಂದಿರದಲ್ಲಿ ದೇವನಹಳ್ಳಿ ಗ್ರಾಮೀಣ ವಿದ್ಯಾಭಿವೃದ್ಧಿ ಸಂಸ್ಥೆ, ರಾಜ್ಯ ಮಹಿಳಾ ಆಯೋಗ ಹಾಗೂ ಮಹಿಳಾ ಮತ್ತು ುಕ್ಕಳ ಕಲ್ಯಾಣ ಇಲಾಖೆ ಮತ್ತು ಸಾಂತ್ವನ ಮಹಿಳಾ ಸಹಾಯವಾಣಿ ಆಶ್ರಯದಲ್ಲಿ ಶುಕ್ರವಾರ ಶಾಲಾ ವಿದ್ಯಾರ್ಥಿಗಳಿಗೆ 'ಮಹಿಳಾ ಶೋಷಣೆ' ವಿಷಯದ ಬಗ್ಗೆ ಕಾನೂನು ಅರಿವು ಜಾಗೃತಿ ಶಿಬಿರ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ವಕೀಲೆ ರಮಾದೇವಿ ಮಾತನಾಡಿ, ಸಮಾಜದಲ್ಲಿ ಹೆಣ್ಣು -ಗಂಡು ಸೌಲಭ್ಯ, ಸ್ಥಾನಮಾನ ಪಡೆಯುವಲ್ಲಿ ಸಮಾನ ಅರ್ಹರು. ಸಂವಿಧಾನ ಪ್ರಕಾರ ಎಲ್ಲರೂ ಗೌರವಯುತವಾಗಿ ಬಾಳುವ ಹಕ್ಕಿದೆ. ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳ ಬೀಜ ಬಿತ್ತಿ, ಶೈಕ್ಷಣಿಕ ಚಟುವಟಿಕೆಗೆಗೆ ಪ್ರೋತ್ಸಾಹಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ನಳಂದ ಪ್ರೌಢಶಾಲೆ ಪ್ರಾಂಶುಪಾಲ ಬಿ.ಎನ್.ಕೃಷ್ಣಪ್ಪ ಮಾತನಾಡಿದರು. ವಿದ್ಯಾರ್ಥಿನಿಯರು ಅಥವಾ ಮಹಿಳೆಯರಿಗೆ ಯಾವುದೇ ರೀತಿಯ ತೊಂದರೆ ಸಂಭವಿಸಿದಲ್ಲಿ ದೇವನಹಳ್ಳಿಯ ಸಾಂತ್ವಾನ ಮಹಿಳಾ ಸಹಾಯವಾಣಿಗೆ (9845106746) ಸಂಪರ್ಕಿಸಬೇಕೆಂದು ಮುಖ್ಯಸ್ಥರಾದ ಸೂರ್ಯಕಲಾ ಮೂರ್ತಿರವರು ತಿಳಿಸಿದರು. ಸಲಹಾ ಸಮಿತಿ ಅಧ್ಯಕ್ಷ ಡಾ. ಎನ್.ನರಸಿಂಹಮೂರ್ತಿ ಸ್ವಾಗತ ಕೋರಿದರು. ನಳಂದ ಕಾಲೇಜು ಪ್ರಾಂಶುಪಾಲ ಡಿ.ಸಿ.ವೆಂಕಟೇಶಗೌಡ, ಶ್ರೀಕೃಷ್ಣ ಐಟಿಐ ಪ್ರಾಂಶುಪಾಲರಾದ ಮುರಾರಿ ಉಪಸ್ಥಿತರಿದ್ದರು.