ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಒಂದು ದಿನದ ಸಾಂಸ್ಕೃತಿಕ ಅಧ್ಯಯನ ಶಿಬಿರ

Rashmi Kasaragodu
Updated On : 11 Feb 2013, 12:37 pm

ಕನಕಪುರ: ಕನಕಪುರದ ಸರ್ಕಾರಿ ಪದವಿ ಕಾಲೇಜಿನ ಪರಂಪರಾ ಕೂಟದಿಂದ ಇಲ್ಲಿನ ಸುಪ್ರಸಿದ್ಧ ಹಿರೇಮಡಿವಾಳದಲ್ಲಿ ಒಂದು ದಿನದ ಸಾಂಸ್ಕೃತಿಕ ಅಧ್ಯಯನ ಶಿಬಿರ ಪ್ರೊ. ವೃಷಭೇಂದ್ರಮೂರ್ತಿ, ದೈ.ಶಿ.ನಿರ್ದೇಶಕ ನಟೇಶ್‌ಬಾಬು ನೇತೃತ್ವದಲ್ಲಿ ನಡೆಯಿತು. ಶಿಬಿರದಲ್ಲಿ 35 ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕನಕಪುರ ತಾಲೂಕಿನ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾದ ಸಂಗಮದಿಂದ ಸುಮಾರು ಆರು ಕಿಮೀ ದೂರದಲ್ಲಿನ ಮಡಿವಾಳ ಐತಿಹಾಸಿಕ ಪ್ರಾಮುಖ್ಯತೆ ಪಡೆದಿದ್ದು, ಇಲ್ಲಿನ ಶಿವನಾಂಕಾರೇಶ್ವರ ತಾಲೂಕಿನ ಸಾವಿರಾರು ಕುಟುಂಬಗಳ ಆರಾಧ್ಯ ದೈವವಾಗಿದೆ.
ಸಮೀಪದಲ್ಲಿಯೇ ಹರಿಯುವ ಸೀತನಕೊಟ್ಟ ಅಥವಾ ಚಿಕ್ಕಅರ್ಕಾವತಿ ನದಿ ತೀರದಲ್ಲಿನ ದೇವಾಲಯ, ಸುಂದರ ವನಸಿರಿ ಮನಸೆಳೆಯುತ್ತದೆ. ನೂರಾರು ವರ್ಷ ಹಳೆಯದಾದ ಶಿಲಾಶಾಸನಗಳು, ಕೆತ್ತನೆಗಳೂ ಇಲ್ಲಿ ಕಂಡುಬರುತ್ತವೆ ಎಂದು ಮೂರ್ತಿ ನುಡಿದರು.
ನಟೇಶ್‌ಬಾಬು ಮಾತನಾಡುತ್ತಾ, ವಿದ್ಯಾರ್ಥಿಗಲು ಐತಿಹಾಸಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು. ನಮ್ಮ ನೆರೆಹೊರೆಯ ಪ್ರದೇಶಗಳಲ್ಲಿಯೇ ಹಲವಾರು ಐತಿಹಾಸಿಕ ಕುರುಹುಗಳಾದ ಮಾಸ್ತಿಕಲ್ಲು, ವೀರಗಲ್ಲು, ಶಿಲಾಶಾಸನಗಳು ದೊರೆಯಬಹುದು. ನಾವು ಕುತೂಹಲದಿಂದ ಗಮನಿಸಿದರೆ ಇತಿಹಾಸದ ಮೇಲೆ ಪ್ರಭಾವ ಬೀರುವ ಅನೇಕ ಕುರುಹುಗಳು ಕಂಡುಬರುತ್ತವೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement