ಸತ್ಯಮಂಗಲದಲ್ಲಿ ಗಂಡಾನೆ ಸಾವು
ಕೊಳ್ಳೇಗಾಲ: ತಾಲೂಕಿನ ಕೌದಳ್ಳಿ ಅರಣ್ಯ ವಲಯ ವ್ಯಾಪ್ತಿಯ ಸತ್ಯ ಮಂಗಲದ ಎ ಬೀಟ್ನಲ್ಲಿ 22 ವರ್ಷದ ಗಂಡಾನೆಯೊಂದು ಸಾವಿಗೀಡಾಗಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ.
ಮೃತ ಕಾಡಾನೆಯ ಬಾಯಿಯ ವಸಡು ಹಾಗೂ ಸೊಂಡಲಿನಲ್ಲಿ ಬಾರಿ ಪ್ರಮಾಣದ ರಕ್ತಸ್ರಾವವಾಗಿದ್ದು, ಎರಡು ಕಾಡಾನೆಗಳ ಕಾದಾಟದಿಂದ ರಕ್ತ ಗಾಯವಾಗಿ ನಂತರ ಆಹಾರ ಸೇವಿಸಲಾಗದೆ ಈ ಆನೆ ಸಾವಿಗೀಡಾಗಿರಬಹುದು ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಮೈಸೂರಿನ ಪಶು ವೈದ್ಯಾಧಿಕಾರಿ ಡಾ. ರಮೇಶ್ ಅಭಿಪ್ರಾಯಪಟ್ಟಿದ್ದಾರೆ.