ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕೃಷಿ ಸಂವೇದನೆಯನ್ನು ಗೌರವಿಸಿ: ಶಾಸಕ ಜೆ.ನರಸಿಂಹಸ್ವಾಮಿ

Mainashree
Updated On : 12 Feb 2013, 12:17 pm

ದೊಡ್ಡಬಳ್ಳಾಪುರ: ಇಂದಿನ ಯುವಜನತೆ ದೇಶದ ಬೆನ್ನೆಲುಬಾದ ಕಣಷಿಯನ್ನು ಮತ್ತು ಕೃಷಿ ಸಂವೇದನೆಗಳನ್ನು ಗೌರವಿಸಬೇಕು ಎಂದು ಶಾಸಕ ಜೆ.ನರಸಿಂಹಸ್ವಾಮಿ ಹೇಳಿದರು.
ತಾಲೂಕಿನ ಕನಸವಾಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ವಿದ್ಯಾರ್ಥಿಗಳು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡುವುದರ ಜತೆಗೆ ತಮ್ಮ ಮುಂದಿನ ಗುರಿಯನ್ನು ಸ್ಪಷ್ಟಪಡಿಸಿಕೊಂಡು ಎಲ್ಲಾ ಕ್ಷೇತ್ರಗಳಲ್ಲೂ ಕಾರ್ಯನಿರ್ವಹಿಸಿ ದೇಶವನ್ನು ಮುನ್ನಡೆಸುವ ಕಾರ್ಯಕ್ಕೆ ಮುಂದಾಗಬೇಕು.
 ನಗರದ ಮಕ್ಕಳಿಗೆ ಯಾವುದರಲ್ಲೂ ಕಡಿಮೆಯಿಲ್ಲದಂತೆ ಪ್ರತಿಭೆಯನ್ನು ಮೆರೆಯಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಸಿ.ಡಿ.ಸತ್ಯನಾರಾಯಣಗೌಡ ಮಾತನಾಡಿ, ಸರ್ಕಾರಿ ಶಾಲೆಗಳ ಗುಣಮಟ್ಟ ಖಾಸಗಿ ಶಾಲೆ ಕಾಲೇಜುಗಳನ್ನು ಮೀರಿಸಬೇಕು. ಆ ಮೂಲಕ ಪೋಷಕರ ಖಾಸಗಿ ವಿದ್ಯಾಭ್ಯಾಸದ ವ್ಯಾಮೋಹವನ್ನು ಬಿಡಿಸಬೇಕು ಎಂದರು.
ಮುಖ್ಯ ಅತಿಥಿ ಪತ್ರಕತ್ರ ಮಂಜುನಾಥ ಎಂ. ಅದ್ದೆ ಮಾತನಾಡಿ ಮಾನವೀಯತೆ ಮಾಯವಾಗುತ್ತಿರುವ ಈ ಸಂದರ್ಭದಲ್ಲಿ ಯುವಜನತೆ ಎಚ್ಚೆತ್ತುಕೊಳ್ಳದೆ ಹೋದರೆ, ದೇಶಕ್ಕೆ ಉಳಿಗಾಲವಿಲ್ಲ. ಯಾರದೋ ಆಸ್ತಿ ಕಬಳಿಸಿ ಸಿರಿವಂತರಾಗಿ ಮೆರೆಯುವವರನ್ನು ಇಂದಿನ ಯುವಜನತೆ ಮಾದರಿಗಳಾಗಿ ನೋಡದೆ ಗಾಂಧಿ, ಅಂಬೇಡ್ಕರ್, ಕುವೆಂಪುರಂಥ ಮಹಾನ್ ಮಾನವತಾವಾದಿಗಳನ್ನು ಮಾದರಿಗಳಾಗಿ ತೆಗೆದುಕೊಳ್ಳಬೇಕಿದೆ. ಗ್ರಾಮೀಣ ಕುಟುಂಬಗಳು ಮೇಲ್ನೋಟಕ್ಕೆ ಪಿತೃಪ್ರಧಾನವಾಗಿ ಕಂಡರೂ ಕೃಷಿ ಕುಟುಂಬಗಳನ್ನು ಸಲಹುತ್ತಿರುವುದು ನಮ್ಮ ತಾಯಂದಿರು. ಹಾಗಾಗಿ ಹೆಣ್ಣಿಗೆ ಎಲ್ಲಿ ಗೌರವವಿರುತ್ತದೋ ಆ ಸಮಾಜ ಮಾತ್ರ ಉಳಿಯಬಲ್ಲದು. ಇದನ್ನು ನಾವೆಲ್ಲಾ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು. ಸಾವಯವ ಕೃಷಿ ಕುರಿತು  ಎಸ್.ಶಿವಪ್ಪ ಉಪನ್ಯಾಸ ನೀಡಿದರು.
ಉಪನ್ಯಾಸಕಿ ವೃಂದಮ್ಮ, ಶಿಕ್ಷಕ ನರಸಯ್ಯ ವಾರ್ಷಿಕ ವರದಿ ಓದಿದರು. ಪ್ರಾಂಶುಪಾಲ ಹೆಚ್.ಎಸ್.ರಾಜಶೇಖರಯ್ಯ ಅಧ್ಯಕ್ಷತೆ ವಹಿಸಿದ್ದರು.ಕೊಳಗೇರಿ ಅಭಿವೃದ್ಧಿ ಮಂಡಳಿ ಸದಸ್ಯ ಆರ್.ದಯಾನಂದಸ್ವಾಮಿ, ಭೂ ಮಂಜೂರಾತಿ ಸಮಿತಿ ಸದಸ್ಯ ಆರ್.ಸಿ. ರಾಮಲಿಂಗಯ್ಯ, ಜಿ.ಪಂ ಮಾಜಿ ಅಧ್ಯಕ್ಷೆ ಭಾಗ್ಯಮ್ಮ,ತ ಾ.ಪಂ.ಅಧ್ಯಕ್ಷ ನಾಗರಾಜು, ಮಾಜಿ ಅಧ್ಯಕ್ಷ ಪ್ರಸನ್ನಕುಮಾರ್, ಕನಸವಾಡಿ ಗ್ರಾ.ಪಂ.ಅಧ್ಯಕ್ಷೆ ಭಾಗ್ಯಮ್ಮ, ಮುಖಂಡರಾದ ಗಿರೀಶ್, ವಿಜಯಕುಮಾರ್, ಗಂಗರಾಜು, ಕಾಲೇಜು ಹಳೇ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement