ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಗ್ರಾಮೀಣರಿಗೆ ಶುದ್ಧ ನೀರೇ ಟೀಕಾಕಾರಿಗೆ ತಕ್ಕ ಉತ್ತರ: ಡಿಕೆಶಿ

Mainashree
Updated On : 12 Feb 2013, 12:13 pm

ಕನಕಪುರ: ದೇಶದ ಮಹಾನ್ ರಾಜಕಾರಣಿಗಳು, ಉದ್ಯಮಿಗಳು ಉಪಯೋಗಿಸುವ ಪರಿಶುದ್ಧ ಕುಡಿಯುವ ನೀರನ್ನು ಗ್ರಾಮೀಣ ಜನರಿಗೆ ಒದಗಿಸುವ ಮೂಲಕ ಟೀಕಾಕಾರರಿಗೆ ತಕ್ಕ ಉತ್ತರ ನೀಡುತ್ತಿದ್ದೇನೆ ಎಂದು ಶಾಸಕ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಅವರು ತಾಲೂಕು ಕಲ್ಲಹಳ್ಳಿ ಹಾಗೂ ತುಂಗಣಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಘಟಕಗಳ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು. ಪುರಸಭಾಧ್ಯಕ್ಷ ಆರ್. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
ಎರಡೂವರೆ ದಶಕಗಳ ಕಾಲ ಕನಕಪುರವನ್ನು ಪ್ರತಿನಿಧಿಸಿದ ಮಾಜಿ ಸಚಿವ ಸಿಂಧ್ಯಾ ಹಾಗೂ ತಮ್ಮ ಕಾಲದ ಅಭಿವೃದ್ಧಿ ಕಾರ್ಯಗಳನ್ನು ಜನರೇ ತಾಳೆ ಹಾಕಿ ನೋಡಲಿ. ನಂಜುಂಡಪ್ಪ ವರದಿಯಲ್ಲಿ ಕಡೆಯ ಸ್ಥಾನದಲ್ಲಿದ್ದ ಕ್ಷೇತ್ರವನ್ನು ಮೊದಲ ಹತ್ತು ಸ್ಥಾನದೊಳಗೆ ತಂದಿರುವ ವಿಶ್ವಾಸ, ಸಮಾಧಾನ ಇದೆ ಎಂದು ಶಿವಕುಮಾರ್ ನುಡಿದರು.  ಬಿಎಸ್ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿಂಧ್ಯಾರನ್ನು ಅಧಿನಾಯಕಿ ಮಾಯಾವತಿ 300 ಕೋಟಿ  ಅವ್ಯವಹಾರ ಆರೋಪದ ಮೇಲೆ ಉಚ್ಚಾಟಿಸಿರುವುದು ಬಹಿರಂಗ ಸತ್ಯವಾಗಿದ್ದು, ಕ್ಷೇತ್ರದ ಜನತೆ ಜೊಳ್ಳು ಹಾಗೂ ಗಟ್ಟಿಕಾಳುಗಳ ನಡುವಿನ ವ್ಯತ್ಯಾಸ ಅರಿತುಕೊಳ್ಳಬೇಕು ಎಂದು ಮಾರ್ಮಿಕವಾಗಿ ಹೇಳಿದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ತಾಪಂ ಮಾಜಿ ಅಧ್ಯಕ್ಷ ಪುರುಷೋತ್ತಮ್, ಮಾಜಿ ಅಧ್ಯಕ್ಷೆ ಸುಕನ್ಯಾ ರಂಗಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ಮುತ್ತೇಗೌಡ, ಜಿಪಂ ಸದಸ್ಯ ವೆಂಕಟೇಶಯ್ಯ, ನಳಿನಾ ರವಿಶಂಕರ್, ಮುಖಂಡರುಗಳಾದ ರಾಯಸಂದ್ರ ರವಿ, ವಿಜಯದೇವ್,ದಿಲೀಪ್, ವಿಶ್ವನಾಥ್,ಶ್ರೀನಿವಾಸ್ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement