ಮುದ್ದುರಾಜ ಯಾದವ್ ಸನ್ಮಾನ
ಮಾಗಡಿ: 10 ಲಕ್ಷ ರು. ವೆಚ್ಚದಲ್ಲಿ ಶ್ರೀರಂಗನಾಥಸ್ವಾಮಿ ದೇವಾಲಯದ ಬಳಿ ಇರುವ ಗೊಲ್ಲರ ಅರವಂಟಿಕೆಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೆ.ಮುದ್ದುರಾಜ ಯಾದವ್ ತಿಳಿಸಿದರು. ಅವರು ತಾಲೂಕು ಗೊಲ್ಲ(ಯಾದವ)ನೌಕರರ ಕ್ಷೇಮಾಭಿವೃದ್ಧಿ ಸಂಘ ಪದಾಧಿಕಾರಿಗಳು ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಗೊಲ್ಲ ಜನಾಂಗ ಮೂಡನಂಬಿಕೆ ಬಿಟ್ಟು, ಅಕ್ಷರಸ್ಥರಾಗಬೇಕು. ವಿದ್ಯೆ ಬದುಕಿಗೆ ದಾರಿದೀಪ, ಈ ನಿಟ್ಟಿನಲ್ಲಿ ಜೀವನ ಮಟ್ಟ ಸುಧಾರಣೆಗೆ ಶ್ರಮಿಸುವಂತೆ ಕರೆ ನೀಡಿದರು.
ಗೊಲ್ಲ(ಯಾದವ)ನೌಕರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಕದರಯ್ಯ, ಅಧ್ಯಕ್ಷ ಎನ್. ಶಿವಕುಮಾರ್, ಕಾರ್ಯದರ್ಶಿ ಶಿಕ್ಷಕ ಮಾರಣ್ಣ, ಆನಂದ್, ರಾಮಯ್ಯ, ಚಿಕ್ಕವೆಂಕಟಪ್ಪ ಇತರರು ಇದ್ದರು.