ಕೇಂದ್ರ ಸರ್ಕಾರದ ಕ್ರಮಕ್ಕೆ ಡಿಕೆಶಿ ಸ್ವಾಗತ
ರಾಮನಗರ: ಕನಕಪುರ, ಕೊಳ್ಳೇಗಾಲ, ಚಾಮರಾಜನಗರ ಮಾರ್ಗವಾಗಿ ಬೆಂಗಳೂರು-ದಿಂಡಿಗಲ್ಲು ರಾಷ್ಟ್ರೀಯ ಹೆದ್ದಾರಿ 209 ಅನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸ್ವಾಗತಿಸಿದ್ದಾರೆ. ಕನಕಪುರದಲ್ಲಿ ಬೈಪಾಸ್ ಒಳಗೊಂಡಂತೆ ತಮಿಳುನಾಡು ಗಡಿವರೆಗೆ 141 ಕಿ.ಮೀ. ರಸ್ತೆಗೆ ಭೂ ಸ್ವಾಧೀನ ಪ್ರಕ್ರಿಯೆಗೆ ಅಧಿಕಣತ ಚಾಲನೆ ನೀಡಲಾಗಿದೆ. ಯೋಜನೆಗೆ ಮಂಜೂರಾತಿ ದೊರೆಕಿಸಿಕೊಟ್ಟಿರುವ ಕೇಂದ್ರ ರಸ್ತೆ ಸಾರಿಗೆ ಸಚಿವ ಸಿ.ಪಿ.ಜೋಷಿ, ಮಂಜೂರಾತಿಗಾಗಿ ಶ್ರಮಿಸಿದ ಸಚಿವ ಮುನಿಯಪ್ಪ, ಸಂಸದ ದ್ರುವನಾರಾಯಣ್ ಅವರನ್ನು ಅಭಿನಂದಿಸುವುದಾಗಿ ಶಿವಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.