ಮಗಳ ಮೇಲೆ ಅತ್ಯಾಚಾರ ಎಸಗಿದ ಕಾಮುಕ ತಂದೆ
ರಾಮನಗರ: ಕಾಮುಕ ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ಜಿಲ್ಲೆಯ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಮಹಾನಗರಕ್ಕೆ ಸೇರಿದ ಬಿಇಎಲ್ ಬಡಾವಣೆಯಲ್ಲಿ ಈ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.
ಸಿದ್ದಲಿಂಗಪ್ಪ (45) ಅತ್ಯಾಚಾರವೆಸಗಿರುವ ವ್ಯಕ್ತಿಯಾಗಿದ್ದಾನೆ ಎಂದು ಆರೋಪಿಸಿ ಆತನ ಪತ್ನಿಯೇ ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನೆ ಸಂಭವಿಸಿದ ದಿನ ತಾನು ಸಹೋದರನ ಮನೆಗೆ ಹೋಗಿದ್ದು, ಅಲ್ಲೇ ವಾಸ್ತವ್ಯ ಮಾಡಿದ್ದೆ.
ಮನೆಯಲ್ಲಿ ತನ್ನ ಪತಿ, ಮಕ್ಕಳಿದ್ದರು. ಅಂದು ಮಧ್ಯರಾತ್ರಿ ನನ್ನ ಪತಿಯು ಮಗಳ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಆಕೆ ದೂರಿನಲ್ಲಿ ಆಪಾದಿಸಿದ್ದಾಳೆ.
ಅತ್ಯಾಚಾರಕ್ಕೆ ಒಳಗಾಗಿದ್ದಾಳೆ ಎಂದು ಹೇಳಲಾಗಿರುವ ಬಾಲಕಿ 13 ವರ್ಷದವಳಾಗಿದ್ದಾಳೆ. ಘಟನೆ ಕುರಿತು ತಾವರೆಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.