ಲೈಂಗಿಕ ಕಿರುಕುಳ ಮುಖ್ಯ ಶಿಕ್ಷಕ ಸಸ್ಪೆಂಡ್
ಕೊಳ್ಳೇಗಾಲ: ಮುಖ್ಯ ಶಿಕ್ಷಕನೊಬ್ಬ ವಿದ್ಯಾರ್ಥಿನಿಯೊಬ್ಬಳನ್ನು ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದ್ದು ಮುಖ್ಯ ಶಿಕ್ಷಕ ಲೀಯೋ ಮೈಕಲ್ ಎಂಬಾತನನ್ನು ಅಮಾನತು ಮಾಡಲಾಗಿದೆ. ಬಸ್ತಿಪುರ ಗ್ರಾಮದ ಮೈಕಲ್, 10ನೇ ತರಗತಿ ವಿದ್ಯಾರ್ಥಿಯೊಬ್ಬಳನ್ನು ಸೋಮವಾರ ಪಟ್ಟಣದಿಂದ ಇತರೆ ಏಳು ವಿದ್ಯಾರ್ಥಿನಿಯರೊಂದಿಗೆ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಕ್ರೀಡಾಕೂಟದಲ್ಲಿ ಭಾಗವಹಿಸಲು ಕರೆದೊಯ್ದಿದ್ದ. ಆಗ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲಿಂದ ತಪ್ಪಿಸಿಕೊಂಡ ವಿದ್ಯಾರ್ಥಿನಿ ಮನೆಗೆ ಫೋನ್ ಮಾಡಿ ಪಾಲಕರಿಗೆ ತಿಳಿಸಿದ್ದಾಳೆ.