ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜಲ್ಲಿ ಕ್ರಷರ್‌ಗೆ ಅನುಮತಿ ನೀಡದಂತೆ ಒತ್ತಾಯ

Rashmi Kasaragodu
Updated On : 14 Feb 2013, 12:34 pm

ಬೆಂಗಳೂರು: ಕನಕಪುರ ತಾಲೂಕಿನ ನರಿಪುರ ಗ್ರಾಮದಲ್ಲಿ ಜಲ್ಲಿ ಕ್ರಷರ್ ಘಟಕ ಸ್ಥಾಪಿಸಲು ಅನುಮತಿ ನೀಡಬಾರದೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕನಕಪುರ ತಾಲೂಕಿನ ಸಾತನೂರು ಹೋಬಳಿಯ ನರಿಪುರ ಗ್ರಾಮದ ಸರ್ವೆ ನಂಬರ್ 87ರಲ್ಲಿರುವ ಸರ್ಕಾರಿ ಗೋಮಾಳ ಸೇರಿದಂತೆ 287 ಎಕರೆ ಪ್ರದೇಶದಲ್ಲಿ ಜಲ್ಲಿ ಕ್ರಷರ್ ಸ್ಥಾಪಿಸುವ ಪ್ರಯತ್ನ ನಡೆದಿದೆ. ಏಕೆಂದರೆ, ಈ ಜಾಗವನ್ನು ಸರ್ಕಾರ ಜಲ್ಲಿ ಕ್ರಷರ್‌ಗೆ ಸುರಕ್ಷಿತ ವಲಯ ಎಂದು ಗುರುತಿಸಿ ಅಧಿಸೂಚನೆಯನ್ನೂ ಹೊರಡಿಸಿದೆ.
ಅಷ್ಟೇ ಅಲ್ಲದೆ, ಜಲ್ಲಿ ಕ್ರಮಷರ್ ಘಟಕ ಸ್ಥಾಪಿಸುವವರಿಗೆ ಆಹ್ವಾನವನ್ನೂ ನೀಡಿದ್ದು, ಕೆಲವರು ಈಗಾಗಲೇ ಘಟಕ ಸ್ಥಾಪನೆ ಸಿದ್ಧತೆಯನ್ನೂ ನಡೆಸುತ್ತಿದ್ದಾರೆ. ಆದರೆ, ಈ ಪ್ರದೇಶದಲ್ಲಿ ಜಲ್ಲಿ ಕ್ರಷರ್ ಘಟಕ ಸ್ಥಾಪಿಸಿದರೆ ಸುತ್ತಮುತ್ತಲ ಗ್ರಾಮಗಳಿಗೆ ತೀರಾ ಹಾನಿಯಾಗುತ್ತದೆ ಎಂದು ಸಾತನೂರು ಹೋಬಳಿಯ ದಾಳಿಂಬ ಗ್ರಾಮಸ್ಥರಾದ ಕೃಷ್ಣೇಗೌಡ ಹಾಗೂ ಚನ್ನೇಗೌಡ ಒತ್ತಾಯಿಸಿದ್ದಾರೆ.
ಜಲ್ಲಿ ಕ್ರಷರ್ ಘಟಕ ಸ್ಥಾಪನೆಯಾದರೆ, ಸಾತನೂರು ಹೋಬಳಿಯ ದಾಳಿಂಬ, ವಡ್ಡರಹಳ್ಳಿ, ಸಾಸಲಪುರ, ಸಂಬೇಗೌಡನದೊಡ್ಡಿ, ಕುರುಬಳ್ಳಿದೊಡ್ಡಿ, ಹಲಸಿನಮರದದೊಡ್ಡಿ, ರೆವಿನ್ಯೂ ಗ್ರಾಮಗಳಲ್ಲಿ ಕೃಷಿ, ಪಶುಸಂಗೋಪನೆ ಮತ್ತು ಹೈನುಗಾರಿಕೆಗೆ ತೊಂದರೆಯಾಗುತ್ತದೆ. ಡಿ.ಎಂ.ನಂಜುಂಡಪ್ಪ ವರದಿ ಪ್ರಕಾರ, ಅತಿ ಹಿಂದುಳಿದ ತಾಲೂಕುಗಳಲ್ಲಿ 173ನೇ ಸ್ಥಾನದಲ್ಲಿದೆ. ಅಂದರೆ, ಇಲ್ಲಿ ಅರ್ಥಿಕ ಮೂಲವಿಲ್ಲದೆ ಬಡತನ ರೇಖೆಗಿಂತ ಕೆಳಗೆ ಬದುಕುತ್ತಿದ್ದಾರೆ. ಆದ್ದರಿಂದ ರಾಮನಗರ ಜಿಲ್ಲಾಡಳಿತ ಹೋಬಳಿಯಲ್ಲಿ 287 ಎಕರೆ ಪ್ರದೇಶವನ್ನು ಜಲ್ಲಿ ಕ್ರಷರ್ ಸುರಕ್ಷಿತ ಪ್ರದೇಶವೆಂದು ಘೋಷಿಸಿರುವ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement