ಸೂಲಿಬೆಲೆ: ವಿವೇಕಾನಂದ ವಿಗ್ರಹ ಪ್ರತಿಷ್ಠಾಪನೆಗೆ ಸಿಗಲಿಲ್ಲ ಅನುಮತಿ
ಸೂಲಿಬೆಲೆ: ಇಲ್ಲಿನ ಹೊಸ ಬಸ್ ನಿಲ್ದಾಣದಲ್ಲಿ ವಿವೇಕಾನಂದರ ವಿಗ್ರಹ ಪ್ರತಿಷ್ಠಾಪನೆಗೆ ಗ್ರಾಪಂ ಅನುಮತಿ ನಿರಾಕರಿಸಿದೆ. ಇದರಿಂದ ಸ್ಥಾಪನೆಗೆ ಅಡ್ಡಿಪಡಿಸಿದವರ ಮುಖದಲ್ಲಿ ಮಂದಹಾಸಮೂಡಿಸಿದೆ.
ವಿಗ್ರಹ ಸ್ಥಾಪನೆಗೆ ಅನುಮತಿ ನೀಡುವಂತೆ ಕೋರಿ ಗ್ರಾಮದ ಕೆಲ ಮುಖಂಡರು ಸಲ್ಲಿಸಿರುವ ಬಗ್ಗೆ ಬುಧವಾರ ಗ್ರಾಪಂದಲ್ಲಿ ನಡೆದ ತುರ್ತು ಸಭೆಯಲ್ಲಿ ಚರ್ಚೆಗೆ ಬಂತು.
ಸಾರ್ವಜನಿಕ ಹಾಗೂ ವಾಹನಗಳ ಸಂಚಾರವಿರುವ ಪ್ರದೇಶದಲ್ಲಿ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡುವುದಕ್ಕೆ ಸುಪ್ರೀಂಕೋರ್ಟಿನ ತಡೆಯಿದೆ. ಈ ಪ್ರಕಾರ ಅನುಮತಿ ನೀಡಲು ಸಾಧ್ಯವಾಗುವದಿಲ್ಲ ಎಂಬ ವಿಚಾರ ಪಿಡಿಒ ನಾಗರಾಜ್ ಪ್ರಸ್ತಾಪನೆ ಮಾಡುತ್ತಿದ್ದಂತೆ ಕಾನೂನು ಪ್ರಕಾರ ನಡೆದುಕೊಳ್ಳಲು ಸಭೆ ಒಪ್ಪಿತು. ಬಸ್ ನಿಲ್ದಾಣದಲ್ಲಿ ವಿಗ್ರಹ ಸ್ಥಾಪನೆ ಮಾಡದಂತೆ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು.