ರು. 1.50 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕರಿಂದ ಚಾಲನೆ
ದೇವನಹಳ್ಳಿ: ದೇವನಹಳ್ಳಿ ಪುರಸಭೆಯ ವಿವಿಧ ಕಾಮಗಾರಿಗಳಿಗೆ ಶಾಸಕ ವೆಂಕಟಸ್ವಾಮಿ ಹಾಗೂ ಮಾಜಿ ಶಾಸಕ ಜಿ.ಚಂದ್ರಣ್ಣ ಗುರುವಾರ ಸಂಜೆ ಚಾಲನೆ ನೀಡಿದರು.
2012-13 ನೇ ಸಾಲಿನ ರಾಜ್ಯ ಹಣಕಾಸು ನಿಧಿ ಯೋಜನೆಯಲ್ಲಿ ಸುಮಾರು 1.50 ಕೋಟಿ ರು.ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿ ಬೀದಿ ದೀಪಗಳ ಅಳವಡಿಕೆ ಅಲ್ಲದೆ ಕುಡಿಯುವ ನೀರಿನ ನಿರ್ವಹಣೆ ಕಾಮಗಾರಿಗಳು ನಡೆಯಲಿವೆ ಎಂದು ಪುರಸಭಾಧ್ಯಕ್ಷ ಎ.ಎನ್.ವಸಂತಬಾಬು ತಿಳಿಸಿದರು.
ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಎ.ರವೀಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಜಗನ್ನಾಥ್, ಜಿ.ವೇಣುಗೋಪಾಲ್, ತಾಲೂಕು ಜೆಡಿಎಸ್ ಅಧ್ಯಕ್ಷ ಮುನಿಶಾಮಯ್ಯ, ಪುರಸಭಾ ಸದಸ್ಯರಾದ ಆರ್.ಕುಮಾರ್, ಪದ್ಮಾವತಮ್ಮ, ಆರ್. ನಾರಾಯಣಸ್ವಾಮಿ, ಮುಖ್ಯಾಧಿಕಾರಿ ಎಂ.ಆರ್. ಮಂಜುನಾಥ್ ಉಪಸ್ಥಿತರಿದ್ದರು.