ಹಬ್ಬಗಳ ಆಚರಣೆಯಲ್ಲಿ ರಾಜಕೀಯ ಬೇಡ: ನಾಗರಾಜ್
ಸೂಲಿಬೆಲೆ: ಎಲ್ಲರು ಕೂಡಿ ಆಚರಣೆ ಮಾಡುವ ಸಂಕ್ರಾಂತಿ ಹಬ್ಬದಲ್ಲಿ ರಾಜಕೀಯ ಬೆರೆಸಿ ಗ್ರಾಮದಲ್ಲಿರುವ ಶಾಂತಿಯನ್ನು ಕದಡುವದು ಸರಿಯಲ್ಲ. ಜನ ಶಾಂತಿ ನೆಮ್ಮದಿಯಿಂದ ಒಗ್ಗೂಟ್ಟನ್ನು ಕಾಪಾಡಬೇಕು ಎಂದು ಮಾಜಿ ಶಾಸಕ ಎನ್. ನಾಗರಾಜ್ ಹೇಳಿದ್ದಾರೆ.
ಸೂಲಿಬೆಲೆ ಬಳಿಯ ಅರಸನಹಳ್ಳಿ ಗ್ರಾಮದಲ್ಲಿ ಸೋಮವಾರದಿಂದ ಎರಡು ದಿನಗಳ ಕಾಲ ನಡೆದ ಸಂಕ್ರಾಂತಿ ಹಬ್ಬ ಆಚರಣೆ ಮಂಗಳವಾರದ ಮುಕ್ತಾಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಗ್ರಾಮದಲ್ಲಿ ಕಾಂಗ್ರೆಸ್ ಸಡಗರದಿಂದ ಆಚರಣೆ ಮಾಡಲು ಉದ್ದೇಶಿಸಿದ ಸಂಕ್ರಾಂತಿ ಹಬ್ಬವನ್ನು ನಿಲ್ಲಿಸಲು ಕೆಲವರು ಇಲ್ಲದ ಘರ್ಷಣಿಗೆ ಕಾರಣರಾದರು. ಇದನ್ನು ಮೆಟ್ಟಿ ನಿಂತು ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಆಚರಣೆ ಮಾಡಲಾಗಿದೆ. ಯಾರು ಗಲಭೆ ಮತ್ತು ಘರ್ಷಣೆಗೆ ಕಾರಣ ಎಂದು ಜನ ತಿಳಿಯಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮಾಂತರ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಮಲಾಕ್ಷಿ ರಾಜಣ್ಣ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮುನಿಶಾಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪ್ರಸಾದ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲಪ್ಪ, ಮುಖಂಡ ಸೀನಪ್ಪ, ತಾಪಂ ಮಾಜಿ ಸದಸ್ಯ ಯರೇಗೌಡ, ಅಲ್ಪ ಸಂಖ್ಯಾತರ ಘಟಕ ಅಧ್ಯಕ್ಷ ಖಲಂದರ್ ಖಾನ್, ತಾಪಂ ಮಾಜಿ ಸದಸ್ಯ ಚನ್ನಪ್ಪ, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಮರುವೆ ಕೃಷ್ಣಪ್ಪ, ಮುಖಂಡ ಬಾಲೇನಹಳ್ಳಿ ಗುಂಡಪ್ಪ, ಅಂಕೋನಹಳ್ಳಿ ಸೋಮಶೇಖರ್, ನಾರಾಯಣಸ್ವಾಮಿ, ಎಸ್.ಕೆ ರಾಘವೇಂದ್ರ, ವೆಂಕಟೇಶ್ ಸೇರಿದಂತೆ ಗ್ರಾಪಂ ಸದಸ್ಯರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.