ಹೂಡಿಕೆದಾರರ ಸಮಾವೇಶ (ಸುದ್ದಿ ಸಂಕ್ಷೇಪ)
ಮಾಗಡಿ: ಹಣ ಹೂಡಿಕೆ ಕುರಿತು ಗ್ರಾಹಕರಿಗೆ ಅರಿವು ಮೂಡಿಸುವ ಉದ್ದೇಶ ಮುತ್ತೂಟ್ ಸಂಸ್ಥೆ ಹೊಂದಿದೆ ಎಂದು ಪುರಸಭೆ ಅಧ್ಯಕ್ಷೆ ಸಮಾಗಂಗರೇವಣ್ಣ ನುಡಿದರು. ಅವರು ಪಟ್ಟಣದ ವಾಸವಿ ಮಹಲ್ನಲ್ಲಿ ಮುತ್ತೂಟ್ ಹಣಕಾಸು ಸಂಸ್ಥೆ ಏರ್ಪಡಿಸಿದ್ದ ಹೂಡಿಕೆದಾರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಮುತ್ತೂಟ್ ಹಣಕಾಸು ಸಂಸ್ಥೆಯ ಚರಿಯನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
17ರಂದು ಉಚಿತ ನೇತ್ರ ತಪಾಸಣೆ
ಬೆಂಗಳೂರು: ಸಿಂಧಿ ಪಂಚಾಯತಿ ಧರ್ಮಶಾಲಾ ಮತ್ತು ನಾರಾಯಣ ನೇತ್ರಾಲಯದ ಸಹಯೋಗದೊಂದಿಗೆ ಫೆ. 17ರಂದು ಉಚಿತ ನೇತ್ರ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಉಚಿತ ಕಣ್ಣಿನ ತಪಾಸಣೆ, ಎಲ್ಲಾ ರೀತಿಯ ಆರ್ಬಿಎಸ್, ಎ-ಸ್ಕ್ಯಾನ್ ಮತ್ತು ಬಿಆರ್ ತಪಾಸಣೆ ಮಾಡಲಾಗುತ್ತದೆ. ವೈದ್ಯರ ಸೂಚನೆ ಮೇರೆಗೆ ಉಚಿತ ಕನ್ನಡಕಗಳನ್ನು ವಿತರಿಸಲಾಗುವುದು. ಶಿಬಿರದಲ್ಲಿ ಪಾಲೊಳ್ಳಲು ಇಚ್ಛಿಸುವವರು ನೋಂದಣಿ ಮಾಡಿಕೊಳ್ಳಬಹುದು.ಹೆಚ್ಚಿನ ಮಾಹಿತಿಗೆ- 25599557, 9945581082.
ವಿದ್ಯಾರ್ಥಿಗಳಿಗಾಗಿ ಕ್ಯಾಂಪಸ್ ಕ್ವಿಜ್
ಟಾಟಾ ಕ್ರುಸಿಬಲ್ ವಿದ್ಯಾರ್ಥಿಗಳಿಗಾಗಿ ಕ್ಯಾಂಪಸ್ ಕ್ವಿಜ್ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಆಸಕ್ತ ಶಾಲಾ-ಕಾಲೇಜುಗಳು ಭಾಗವಹಿಸಬಹುದಾಗಿದೆ. ಸ್ಪರ್ಧೆಗೆ ಉಚಿತ ಅವಕಾಶವಿದ್ದು, ಲಿಖಿತ ಪರೀಕ್ಷೆ ಮೂಲಕ ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ತಂಡದಲ್ಲಿ ಆಯ್ಕೆಯಾದ ಮತ್ತು ಸ್ಥಳೀಯ ಸುತ್ತಿನಲ್ಲಿ ವಿಜೇತ ತಂಡಗಳು ವಲಯ ಮಟ್ಟದಲ್ಲಿ ಸ್ಪರ್ಧಿಸಬಹುದು. 2 ಮುಂಚೂಣಿ ತಂಡಗಳು ಮುಂಬೈನಲ್ಲಿ ನಡೆಯುವ ರಾಷ್ಟ್ರೀಯ ಫೈನಲ್ಗೆ ಅರ್ಹತೆ ಪಡೆಯಬಹುದಾಗಿದೆ. ಅಂತಿಮವಾಗಿ ಕ್ಯಾಂಪಸ್ ಕ್ವಿಜ್ನ ವಿನ್ನರ್ ಮತ್ತು ರನ್ನರ್ಗಳು ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಸಿಂಗಾಪುರ ಮತ್ತು ಯುಕೆ ತಂಡವನ್ನು ಎದುರಿಸಬೇಕು. ಸ್ಥಳೀಯ ಸುತ್ತಿನ ವಿಜೇತ ತಂಡಕ್ಕೆ 75,000 ಬಹುಮಾನ, ರನ್ನರ್ ಅಪ್ಗೆ 35,000 ಹಾಗೂ ರಾಷ್ಟ್ರೀಯ ಫೈನಲ್ ವಿಜೇತ ತಂಡಕ್ಕೆ 5ಲಕ್ಷ ಮತ್ತು ಟಾಟಾ ಕ್ರುಸಿಬಲ್ ಟ್ರೋಫಿ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಸ್ಪರ್ಧೆ ಕುರಿತು ಹೆಚ್ಚಿನ ಮಾಹಿತಿಗೆ ಢಿಢಿಢಿ.ಡಿಛಡಿಛ್ಛ್ಠ್ಡ್ಛ್ಝಛಿಟಜ.್ಛ್ಟಟ ತಾಣ ವೀಕ್ಷಿಸ್ತಿ
ವಿಧೇಯಕ ಅಂಗೀಕಾರ
ವಿಧಾನಪರಿಷತ್ತು: ಆಡಳಿತ ಪಕ್ಷದ ಸದಸ್ಯರೇ ಅಸಮಾಧಾನ ವ್ಯಕ್ತಪಡಿಸಿದರೂ, ಪ್ರತಿಪಕ್ಷಗಳು ವಿರೋಧಿಸಿದರೂ ವೈದೇಹಿ ವಿಶ್ವವಿದ್ಯಾಲಯ ವಿಧೇಯಕವನ್ನು ಸದನದಲ್ಲಿ ಅಂಗೀಕರಿಸಲಾಯಿತು. ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ವಿಧೇಯಕ ಮಂಡಿಸುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರೇ ವಿರೋಧಿಸಿದರು.