ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕಿರು ಕದನಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಸಜ್ಜು

Parashurama
Updated On : 17 Feb 2013, 12:27 pm

ಚಿಕ್ಕಬಳ್ಳಾಪುರ: ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ-2013ಕ್ಕೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 146 ವಾರ್ಡುಗಳ ಸದಸ್ಯ ಸ್ಥಾನಗಳಿವೆ. ಅವುಗಳಿಗೆ ಚುನಾವಣೆ ನಡೆಸಲು ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಮಂಜುಳಾ ತಿಳಿಸಿದರು.
ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಷಯ ತಿಳಿಸುತ್ತಾ ಚುನಾವಣೆಯ ಅಧಿಸೂಚನೆ ಶನಿವಾರ ಹೊರಡಿಸಲಾಗಿದೆ. ನಾಮಪತ್ರ ಸಲ್ಲಿಸಲು ಕೊನೆ ದಿನ ಫೆ.23, ನಾಮಪತ್ರ ಪರಿಶೀಲನೆ ಫೆ.25, ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆ ದಿನ ಫೆ.27. ಅಗತ್ಯವಿದ್ದರೆ ಮರು ಮತದಾನ ನಡೆಯುವ ದಿನ ಮಾ.9, ಮತ ಎಣಿಕೆ ದಿನ ಮಾ.11, ಬೆ.8 ರಿಂದ ಆಯಾ ತಾಲೂಕು ಕೇಂದ್ರ ಸ್ಥಾನದಲ್ಲಿ ಮತದಾನ ನಡೆಯಲಿದ್ದು, ಅಂದು ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.
ಫೆ.15 ಬೆಳಗ್ಗೆಯಿಂದಲೇ ಪ್ರಕ್ರಿಯೆ ಜಾರಿಗೆ ಬರಲಿದ್ದು, ಮಾ.11 ರವರೆಗೂ ಜಾರಿಯಲ್ಲಿರುತ್ತದೆ. ಸಂಹಿತೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಮಾತ್ರ ಅನ್ವಯಿಸುತ್ತವೆ ಎಂದಲ್ಲದೇ ಚುನಾವಣಾ ಪ್ರಕ್ರಿಯೆಗೆ ನೆರವಾಗಲು ಚಿಂತಾಮಣಿಯಲ್ಲಿ 4 ಚುನಾವಣಾಧಿಕಾರಿಗಳು, 4 ಸಹಾಯಕ ಚುನಾವಣಾಧಿಕಾರಿ, ಚಿಕ್ಕಬಳ್ಳಾಪುರದಲ್ಲಿ 4 ಚುನಾವಣಾಧಿಕಾರಿ ಹಾಗೂ 4 ಸಹಾಯಕ ಚುನಾವಣಾಧಿಕಾರಿಗಳು, ಶಿಡ್ಲಘಟ್ಟದಲ್ಲಿ 3 ಚುನಾವಣಾಧಿಕಾರಿಗಳು ಹಾಗೂ 3 ಸಹಾಯಕ  ಚುನಾವಣಾಧಿಕಾರಿಗಳು, ಗುಡಿಬಂಡೆಯಲ್ಲಿ ಒಬ್ಬರು ಚುನಾವಣಾಧಿಕಾರಿ ಹಾಗೂ ಒಬ್ಬರು ಸಹಾಯಕ ಚುನಾವಣಾಧಿಕಾರಿ, ಗೌರಿಬಿದನೂರಿನಲ್ಲಿ 2 ಚುನಾವಣಾಧಿಕಾರಿಗಳು ಹಾಗೂ 2 ಸಹಾಯಕ ಚುನಾಣಾಧಿಕಾರಿಗಳು, ಬಾಗೇಪಲ್ಲಿಯಲ್ಲಿ 2 ಚುನಾವಣಾಧಿಕಾರಿಗಳು, 2 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.
ಮತದಾನಕ್ಕೆ ವಿದ್ಯುನ್ಮಾನ ಮತಯಂತ್ರ ಬಳಸಲಾಗುವುದು. ಎಲ್ಲಾ ಮತದಾರರಿಗೆ (ಶೇ.99ರಷ್ಟು) ಎಪಿಕ್ ಕಾರ್ಡ್ ವಿತರಿಸಲಾಗಿದೆ. ಚಿಕ್ಕಬಳ್ಳಾಪುರದಲ್ಲಿ 38,000, ಚಿಂತಾಮಣಿಯಲ್ಲಿ 47,000, ಬಾಗೇಪಲ್ಲಿಯಲ್ಲಿ 13,000, ಶಿಡ್ಲಘಟ್ಟದಲ್ಲಿ 28,000, ಗುಡಿಬಂಡೆಯಲ್ಲಿ 6,000, ಗೌರಿಬಿದನೂರಿನಲ್ಲಿ 23,000 ಮತದಾರರಿದ್ದು, ಒಟ್ಟು 1 ಲಕ್ಷ 58 ಸಾವಿರ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಅಪರ ಡಿಸಿ ಸತ್ಯಭಾಮ, ಎಸಿ ಶಾಂತಲಾ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement