ಕಳಪೆ ಕಾಮಗಾರಿ ಒಳಚರಂಡಿ: ಶಾಸಕರಿಗೆ ದೂರು
ಮಾಗಡಿ: ಕುದೂರಿನ ಎರಡನೇ ಬ್ಲಾಕ್ ಲಕ್ಷ್ಮೀದೇವಿ ನಗರದಲ್ಲಿ ಒಳಚರಂಡಿ ಸಂಪರ್ಕ ಕಳಪೆ ಕಾಮಗಾರಿಯಿಂದಾಗಿ ಶೌಚಾಲಯದ ನೀರು ಸಮರ್ಪಕವಾಗಿ ಹರಿಯದೆ ವಾಪಸು ಮನೆಗಳಿಗೆ ಬರುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರನ್ನು ಸುತ್ತುವರೆದು ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು. ಜನಸ್ಪಂದನ ಕಾರ್ಯಕ್ರಮಕ್ಕೆ ಕುದೂರು ಗ್ರಾಮ ಪಂಚಾ ಈಗಾಗಲೇ ಬೇಸಿಗೆ ಕಾಲ ಸಮೀಸುತ್ತಿದೆ. ಕುಡಿಯುವ ನೀರಿಗೂ ತತ್ವಾರ ಉಂಟಾಗಿದ್ದು, ಕಾಲರ ಹರಡುವ ಭೀತಿಯಿಂದ ನಾಗರಿಕರು ತತ್ತರಿಸಿಹೋಗಿದ್ದಾರೆ. ಇಲ್ಲಿ ವಾಸ ಮಾಡುವುದೇ ಕಷ್ಟವಾಗಿದೆ. ಈ ಸಂಬಂಧ ಹಲವಾರು ಬಾರಿ ಪಂಚಾಯ್ತಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಒಂದು ತಿಂಗಳ ಹಿಂದೆ ಚರಂಡಿ ಚೇಂಬರ್ ದುರಸ್ಥಿಪಡಿಸುವ ಭರವಸೆಯನ್ನು ಗ್ರಾಮ ಪಂಚಾಯ್ತಿ ಹಿಂದಿನ ಅಧ್ಯಕ್ಷ ಕೆ.ಬಿ. ಬಾಲರಾಜು ನೀಡಿದ್ದರು. ದುರಸ್ಥಿ ಪಡಿಸದಿದ್ದರೆ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿಯೂ ಹೇಳಿದ್ದರು. ಕೊಟ್ಟಮಾತು ಉಳಿಸಿಕೊಳ್ಳಲಿಲ್ಲ, ರಾಜೀನಾಮೆಯನ್ನೂ ನೀಡಲಿಲ್ಲ ಎಂದು ಆರೋಪಿಸಿದ ನಾಗರಿಕರು ಕೂಡಲೆ ಒಳಚರಂಡಿ ದುರಸ್ಥಿಪಡಿಸಿ ಸರಿಪಡಿಸದಿದ್ದರೆ ಗ್ರಾಪಂ್ತ ಮುಂದೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಮಾಹಿತಿ ಪಡೆದ ಬಾಲಕೃಷ್ಣ, ವಾರದೊಳಗೆ ಒಳಚರಂಡಿ ದುರಸ್ಥಿಪಡಿಸುವಂತೆ ಪಂಚಾಯ್ತಿ ಪಿಡಿಓ ಸೈಯದ್ ಶಮೀರ್ ಅವರಿಗೆ ತಾಕೀತು ಮಾಡಿದರು.