ಟಿಕೆಟ್ ಆಮಿಷ: ಕಾಂಗ್ರೆಸ್ನಿಂದ ದೂರು ದಾಖಲು
ದೊಡ್ಡಬಳ್ಳಾಪುರ: ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಟಿಕೆಟ್ ಕೊಡಿಸಲು ದೆಹಲಿ ಮಟ್ಟದಲ್ಲಿ ಪ್ರಭಾವ ಬೀರುತ್ತೇನೆ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಇಲ್ಲಿನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ದೂರವಾಣಿ ಕರೆ ಮಾಡಿದ್ದಾನೆ ಎನ್ನಲಾಗಿರುವ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ತಾಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ಈ ಬಗ್ಗೆ ಡಾ.ಆದಿತ್ಯ ಶರ್ಮ ಎಂದು ಹೇಳಿಕೊಂಡಿದ್ದಾತನ(ವಾಸ್ತವವಾಗಿ ಮುಖಂಡರೆಲ್ಲರಿಗೂ ಅಪರಿಚಿತ ಎನ್ನಲಾಗಿದೆ) ಮೇಲೆ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈತ ಕ್ಷೇತ್ರದ ಸುಮಾರು 9 ಮಂದಿ ಶಾಸಕ ಸ್ಥಾನದ ಟಿಕೆಟ್ ಆಕಾಂಕ್ಷಿಗಳಿಗೆ ದೂರವಾಣಿ ಕರೆ ಮಾಡಿ ಆಕ್ಸಿಸ್ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವಂತೆ ತಿಳಿಸಿದ್ದ. ಆದರೆ ಖಾತೆ ಸಂಖ್ಯೆ ನೀಡಿರಲಿಲ್ಲ ಎಂದು ತಾ.ಕಾಂಗ್ರೆಸ್ ಸಮಿತಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದೆ ಎನ್ನಲಾಗಿದೆ.