ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬಡವರ ನಿರ್ಲಕ್ಷ್ಯ ಧೋರಣೆಗೆ ಆಕ್ರೋಶ: ಪ್ರತಿಭಟನಾ ಧರಣಿ

Lingaraj Badiger
Updated On : 20 Feb 2013, 11:12 am

ಮಾಗಡಿ:  ಬಡವರ ಬಗ್ಗೆ ನಿರ್ಲಕ್ಷ್ಯ ಧೋರಣೆಯನ್ನು ವಿರೋಧಿಸಿ ತಾಲೂಕು ಪಂಚಾಯ್ತಿ ಮುಂದೆ ಜನಪರ ಹೋರಾಟಗಳ ಒಕ್ಕೂಟ ಪ್ರತಿಭಟನಾ ಧರಣಿ ನಡೆಸಿತು.
ತಾಲೂಕಿನ ಕಡುಬಡವರಿಗೆ ವಿಧವಾ, ವೇತನ, ವೃದ್ಧಾಪ್ಯ ವೇತನ, ನಿರ್ಗತಿಕರ ವೇತನ, ಅಂಗವಿಕಲರ ಮಾಶಾಸನ,  ಬಿಪಿಎಲ್ ಪಡಿತರ ಚೀಟಿಯನ್ನು ತಾಲೂಕು ಆಡಳಿತ ಕೂಡಲೆ ನೀಡಬೇಕು, ಉಳುಮೆ ಮಾಡಿಕೊಂಡು ಬಂದಿರುವ ಶೋಷಿತರಿಗೆ ಸಾಗುವಳಿ ಚೀಟಿ ನೀಡಬೇಕು. ಜೀತದಾಳುಗಳನ್ನು ಗುರುತಿಸಿ ಸೂಕ್ತ ಪರಿಹಾರ ಒದಗಿಸಬೇಕು. ತೋಟಿ, ತಳವಾರ ದೊಂಬಿದಾಸ ಇತರೆ ಕೆಳಜಾತಿ ವರ್ಗದವರಿಗೆ ಸೂಕ್ತ ಸೌಲತ್ತುಗಳನ್ನು ಕಲ್ಪಿಸಬೇಕು.
ಬಡನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ನೀಡಬೇಕು. ಗೃಹ ರಕ್ಷಕ ಠಾಣಿ ತಾಲೂಕು ಮಟ್ಟದಲ್ಲಿ ರಚಿಸಬೇಕು. ಸೋಲೂರು ಬಸ್ ನಿಲ್ದಾಣದಲ್ಲಿ ಎಲ್ಲಾ ಸರ್ಕಾರಿ ಬಸ್‌ಗಳನ್ನು ನಿಲುಗಡೆ ಮಾಡಲು ಸಂಬಂಧಪಟ್ಟವರು ಅಗತ್ಯ ಕ್ರಮ ವಹಿಸಬೇಕು.
ತೀರ ಹಿಂದುಳಿದ ತಾಲೂಕು ಮಾಗಡಿಗೆ ನಿತ್ಯ 24 ಗಂಟೆಗಳೂ ವಿದ್ಯುತ್  ಸೌಕರ್ಯ  ಒದಗಿಸಬೇಕು. ರಾಷ್ಟ್ರೀಯ ಹೆದ್ದಾರಿ 48 ರ ಸೋಲೂರಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದು ಪೊಲೀಸ್  ಠಾಣೆಗೆ ಮಂಜೂರಾತಿ ನೀಡಬೇಕು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ
ತುಮಕೂರು ಡಿಪೋದಿಂದ ಸೋಲೂರು ಮಾರ್ಗವಾಗಿ ಬಸ್ ಸಂಚಾರ ವ್ಯವಸ್ಥೆ ಮಾಡಬೇಕು. ಕಾರ್ಮಿಕ ದಿನಗೂಲಿ ವೇತನ ಕನಿಷ್ಠ 400 ರಿಂದ 500ಕ್ಕೆ ಹೆಚ್ಚಿಸಬೇಕು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಓಕ್ಕೂಟದ ರಾಜ್ಯಾದ್ಯಕ್ಷ ನಂಜುಂಡಯ್ಯ, ತಾಲೂಕು ಅಧ್ಯಕ್ಷ ರಂಗಪ್ಪ, ಜಿಲ್ಲಾಧ್ಯಕ್ಷ  ಅತಾವುಲ್ಲಾ, ಕುದೂರು ಹೋಬಳಿ ಅಧ್ಯಕ್ಷ ಕೆ.ಜಿ. ನಾಗೇಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಲಕ್ಷ್ಮಣ್, ಸಿ.ಶಶಿಕಲಾ, ಸಿ.ಆರ್. ಚನ್ನಪ್ಪ, ಕೋಮಲಾ,  ಲಕ್ಷ್ಮಮ್ಮ, ಗಂಗಮ್ಮ, ಚಿಕ್ಕಮ್ಮ, ತಮಟೆ ಕಲಾವಿದ ಹೊನ್ನಸ್ವಾಮಿ, ಇತರರು ಪ್ರತಿಭಟನಾಧರಣೆಯಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಹೋರಾಟಗಳ ಒಕ್ಕೂಟದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ  ತಾ.ಪಂಗೆ ಮನವಿ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement